ಆಕಾಶ್ ಇಂಟರ್ನ್ಯಾಷನಲ್ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ
ದೇವನಹಳ್ಳಿ: ದೇವನಹಳ್ಳಿ ನಗರದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್ ಸಮೂಹ ಸಂಸ್ಥೆಯ ಆಕಾಶ್ ಇಂಟರ್ನ್ಯಾಷನಲ್ ಶಾಲೆಯ ಐಸಿಎಸ್ಸಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಒಟ್ಟು ೧೫ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಶೇ.೧೦೦ರಷ್ಟು ಫಲಿತಾಂಶವನ್ನು ತಂದುಕೊಟ್ಟಿರುತ್ತಾರೆ.
ಶಾಲೆಯ ವಿದ್ಯಾರ್ಥಿ ಆದಿತ್ಯ.ವಿ (ಶೇ.೯೦.೬), ಶಶಾಂಕ್ ಜೆ.ರೆಡ್ಡಿ (ಶೇ.೮೮.೪) ಅಂಕಗಳನ್ನು ಪಡೆದುಕೊಂಡಿದ್ದು, ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ ಎಂದು ಆಕಾಶ್ ಇಂಟರ್ನ್ಯಾಷನಲ್ ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮುನಿರಾಜು ಮಾತನಾಡಿದರು.
ಚಿತ್ರ: ೭ ಡಿಹೆಚ್ಎಲ್ ಪಿ೩
ವಿದ್ಯಾರ್ಥಿ ಆದಿತ್ಯ.ವಿ (ಶೇ.೯೦.೬) ಮತ್ತು ವಿದ್ಯಾರ್ಥಿ ಶಶಾಂಕ್ ಜೆ.ರೆಡ್ಡಿ (ಶೇ.೮೮.೪) ಭಾವಚಿತ್ರ