ಮೈಸೂರು, ಏಪ್ರಿಲ್ 5, 2025 : ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಪ್ರತಿಷ್ಠಿತ ಮಾನಸ ಕೀಲು ಮೂಳೆ ಆಸ್ಪತ್ರೆಗೆ ಇದೀಗ 12ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ. ಮೈಸೂರಲ್ಲಿ ಅತ್ಯಂತ ಯಶಸ್ವಿಯಾಗಿ 12 ವಸಂತಗಳನ್ನು ಪೂರೈಸಿದ ಮಾನಸ ಕೀಲು ಮೂಳೆ ಆಸ್ಪತ್ರೆ ಅಪಾರ ಜನಮನ್ನಣೆ ಸಲ್ಲಿಸಿದೆ.

ಇನ್ನು , 12ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಕೀಲು ಮೂಳೆ ತಪಾಸಣೆ ಶಿಬಿರ ಮತ್ತು ಮೂಳೆ ಶಸ್ತ್ರ ಚಿಕಿತ್ಸೆ ಕ್ಯಾಂಪ್ ಆಯೋಜನೆ ಮಾಡಲಾಗಿತ್ತು. ನೂರಾರು ಮಂದಿ ಉಚಿತ ಕೀಲು ಮೂಳೆ ತಪಾಸಣೆ ಶಿಬಿರದಲ್ಲಿ ಭಾಗಿಯಾಗಿದ್ದಾರೆ.
ಇದೇ ವೇಳೆ ಮಾನಸ ಕೀಲು ಮೂಳೆ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ಹಿರಿಯ ಕೀಲು ಮೂಳೆ ತಜ್ಞರು, ಹಾಗೂ ಮೈಸೂರಿನ ಕೆ ಆರ್ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕರು ಆಗಿರುವ ಡಾ. ಟಿ ಮಂಜುನಾಥ್ ಮತ್ತು ಮಾನಸ ಕೀಲು ಮೂಳೆ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ರಘುನಂದನ್ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಬೃಂದಾ ಕಾರ್ಯಕ್ರಮದ ಮಾಹಿತಿ ಹಂಚಿಕೊಂಡರು.
ಇನ್ನು, ನೋವಿನಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯ ತಜ್ಞ ವೈದ್ಯರಾದ ಡಾ. ಟಿ ಮಂಜುನಾಥ್ ಮತ್ತು ಡಾ. ರಘುನಂದನ್ ಅವರ ಸೇವೆಯನ್ನು ಗುರುತಿಸಿ ಸಾರ್ವಜನಿಕರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದು ಇವತ್ತಿನ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.
