ಪ್ರತಿನಿಧಿ ವರದಿ ಮಡಿಕೇರಿ
ಕಾಂತೂರು-ಮೂರ್ನಾಡು ಶ್ರೀಪನ್ನಂಗಾಲ ದೇವಿಯ ವಾರ್ಷಿಕೋತ್ಸವವು ಏ.18 ಮತ್ತು 19 ರಂದು ನಡೆಯಲಿದೆ.
ಏ.18 ರಂದು ಬೆಳಿಗ್ಗೆ ದೇವರ ಶುದ್ಧ, ಕಳಸ ಪೂಜೆ, ಕೆರೆ ಮನೆಯಿಂದ ಭಂಡಾರ ತರುವುದು, ಎತ್ತು ಪೋರಾಟ, ದೇವರ ದರ್ಶನ ಹಾಗೂ ಸಂಜೆ 7 ಗಂಟೆಗೆ ಕುರುಂದ ಬಾರಣಿ ಜರುಗಲಿದೆ.
ಏ.19 ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಚಾಮುಂಡಿ ಉತ್ಸವ, ಕುರುಂದಾಟ ದೇವರ ಜಳಕ ನಡೆಯಲಿದೆ. ಎಂದು ದೇವಾಲಯದ ಅಧ್ಯಕ್ಷರು ಹಾಗೂ ತಕ್ಕ ಮುಖ್ಯಸ್ಥರು ಪತ್ರಿಕಾ ಪ್ರಕಟಣೆ ಮೂಲಕತಿಳಿಸಿದ್ದಾರೆ.