ಪ್ರತಿನಿಧಿ ವರದಿ ಮಂಡ್ಯ
ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಅಪರಿಚಿತ ಶವ ಪತ್ತೆಯಾಗಿದೆ.
ಮಳವಳ್ಳಿ ಟೌನ್ ಕೋಟೆ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಪಡಶಾಲೆಯ ಹೊರ ಆವರಣದ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ ಎಂದು ಮಳವಳ್ಳಿ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಗಂಡಸಿಗೆ ಸುಮಾರು 45 ವರ್ಷ ವಯಸ್ಸಾಗಿದ್ದು, 163 ಸೆಂ.ಮೀ. ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಕಪ್ಪು ಬಣ್ಣ ಹಾಗೂ ಬಿಳಿ ಹೂವುಳ್ಳ ಶರ್ಟ್ ಇರುತ್ತದೆ.
ವಾರಸುದಾರರಿದ್ದಲ್ಲಿ ಮಳವಳ್ಳಿ ಟೌನ್ ಪೋಲಿಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಮಳವಳ್ಳಿ ಟೌನ್ ಪೋಲಿಸ್ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಾರಸುದಾರರ ಪತ್ತೆಗಾಗಿ [ ಮಂಡ್ಯ] : ಪಾಂಡವಪುರ ರೈಲ್ವೆ ನಿಲ್ದಾಣದ ಬಸ್ ನಿಲ್ದಾಣದ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ ಎಂದು ಪಾಂಡವಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೃತ ಗಂಡಸಿಗೆ ಸುಮಾರು 45 ರಿಂದ 50 ವರ್ಷ ವಯಸ್ಸಾಗಿದ್ದು, 5 ರಿಂದ 6 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಡಗೈ ತೋಳಿನ ಮೇಲೆ ಅಂಬರೀಷ್, ಸಚಿನ್ ಹಾಗೂ ಬಲಗೈನ ತೋಳಿನ ಮೇಲೆ ರೆಮಿ ಎಂಬ ಹಸಿರು ಹಚ್ಚೆ ಇದ್ದು, ಮೈಮೇಲೆ ಕೆಂಪುಬಣ್ಣದ ತುಂಬುತೋಳಿನ ಶರ್ಟ್ ಮತ್ತು ಸಿಮೆಂಟ್ ಕಲರ್ ಪ್ಯಾಂಟ್ ಇರುತ್ತದೆ.
ವಾರಸುದಾರರಿದ್ದಲ್ಲಿ ದೂ. ಸಂ. 08232-224200/224200, 9480804847 ಹಾಗೂ 9480804808 ಅನ್ನು ಸಂಪರ್ಕಿಸಬಹುದು ಎಂದು ಪಾಂಡವಪುರ ಪೋಲಿಸ್ ಠಾಣೆಯ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.