ಬೆಂಗಳೂರು, ಜ.07: ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಬಂದ್ರೆ ಸಾಕು ಬೆಂಗಳೂರಿನಲ್ಲಿ ಅವರೆಕಾಯಿ ಘಮಲು ಜೋರಾಗಿರುತ್ತೆ. ಈ ವರ್ಷವು ಅವರೆಕಾಯಿ ಮೇಳ ಆರಂಭವಾಗಿದ್ದು, ಅವರೆಕಾಯಿಯಿಂದ ಮಾಡಿದ್ದ ಖಾಧ್ಯಗಳನ್ನ ತಿಂದು ಸಿಲಿಕಾನ್ ಸಿಟಿ ಮಂದಿ ಎಂಜಾಯ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನ್ಯಾಷನಲ್ ಕಾಲೇಜು ಮೈದಾನದಲ್ಲಿ 24ನೇ ಆವೃತ್ತಿಯ ಅವರೆ ಬೇಳೆ ಮೇಳ ನಡಿಯುತ್ತಿದೆ.
ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಮೇಳವನ್ನು ಆಯೋಜಿಸಲಾಗಿದ್ದು, ಸಿಲಿಕಾನ್ ಸಿಟಿ ಜನರಿಗೆ ಹೊಸ ವರ್ಷದ ಆರಂಭದಲ್ಲೇ ಅವರೆ ಬೆಳೆ ವಿವಿಧ ಫುಡ್ ಸವಿಯುವ ಅವಕಾಶ ಸಿಕ್ಕಿದೆ. ಜ.05ರ ಶುಕ್ರವಾರದಿಂದ ಈ ಮೇಳ ಆರಂಭವಾಗಿದ್ದು, ಇನ್ನು ಎರಡು ದಿನಗಳ ಕಾಲ ನಡೆಯಲಿದೆ. ಇನ್ನು ಕಳೆದ ವರ್ಷ ಸುಮಾರು 40 ಸ್ಟಾಲ್ಗಳಿದ್ದರೆ, ಈ ವರ್ಷ ಸುಮಾರು 80 ಸ್ಟಾಲ್ಗಳಿವೆ. ಹಿರಿಯ ನಾಗರಿಕರಿಗೆ ವಿಶೇಷ ಕೌಂಟರ್ ಜೊತೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಸುಮಾರು ನೂರಕ್ಕೂ ಹೆಚ್ಚು ವೆರೈಟಿ ಫುಡ್ಗಳು ಫುಡ್ ಪ್ರಿಯರನ್ನ ಕೈಬೀಸಿ ಕರೆಯುತ್ತಿವೆ.