ಬೆಂಗಳೂರು ಅರಮೆನೆ ಮೈದಾನದಲ್ಲಿ ಇಂದಿನಿಂದ (ನ.24) ಮೂರು ದಿನಗಳ ಕಾಲ ಕಂಬಳ ಪಂದ್ಯ ನಡೆಯಲಿದೆ. ಇಂದು ಬೆಳಗ್ಗೆ 10 ಗಂಟೆಗೆ ಕಂಬಳ ಕಾರ್ಯಕ್ರಮ ಉದ್ಘಾಟಿಸಲಾಗುತ್ತದೆ. ಕಂಬಳದಲ್ಲಿ 200ಕ್ಕೂ ಅಧಿಕ ಕೋಣಗಳು ಭಾಗಿಯಾಗಲಿವೆ. ಕಂಬಳಕ್ಕೆಂದೇ ರಾಜಮಹಾರಾಜ ಹೆಸರಿನ ಟ್ರ್ಯಾಕ್ ತಯಾರಾಗಿದೆ. 157 ಮೀಟರ್ ಉದ್ದ, 8 ಮೀಟರ್ ಅಗಲ ಟ್ರ್ಯಾಕ್ ಒಳಗೊಂಡಿದೆ. ಕಂಬಳ ವೀಕ್ಷಣೆಗೆ ಸುಮಾರು 6ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದೆ.