ಪ್ರರತಿನಿಧಿ ವರದಿ ಮಡಿಕೇರಿ
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಸರಾಸರಿ 43.23 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 10.67 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2217.15 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1186.13 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 71.73 ಮಿ.ಮೀ, ವಿರಾಜಪೇಟೆಯಲ್ಲಿ 45.20 ಮಿ.ಮೀ, ಪೊನ್ನಂಪೇಟೆಯಲ್ಲಿ 42.92 ಮಿ.ಮೀ, ಸೋಮವಾರಪೇಟೆಯಲ್ಲಿ 38.90 ಮಿ.ಮೀ, ಕುಶಾಲನಗರದಲ್ಲಿ 17.40 ಮಿ.ಮೀ, ಮಳೆಯಾಗಿದೆ. ಮಡಿಕೇರಿ ಕಸಬಾ 34.80, ನಾಪೋಕ್ಲು 61.20, ಸಂಪಾಜೆ 81.50, ಭಾಗಮಂಡಲ 109.40, ವಿರಾಜಪೇಟೆ 43.40, ಅಮ್ಮತ್ತಿ 47, ಹುದಿಕೇರಿ 56, ಶ್ರೀಮಂಗಲ 55.60, ಪೊನ್ನಂಪೇಟೆ 40, ಬಾಳೆಲೆ 20.09, ಸೋಮವಾರಪೇಟೆ ಕಸಬಾ 41.80, ಶನಿವಾರಸಂತೆ 35, ಶಾಂತಳ್ಳಿ 52, ಕೊಡ್ಲಿಪೇಟೆ 26.80, ಕುಶಾಲನಗರ 12.60, ಸುಂಟಿಕೊಪ್ಪ 22.20 ಮಿ.ಮೀ.ಮಳೆಯಾಗಿದೆ.