ಮೈಸೂರು: ಅರಮನೆ ಆವರಣದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಈಗಾಗಲೇ ದಸರಾ ಆನೆಗಳ ಒಂದು ತಂಡ ಅರಮನೆ ಆವರಣದಲ್ಲಿ ತಾಲೀಮು ನಿರತವಾಗಿದ್ರೆ, ಇನ್ನೊಂದು ತಂಡ ಜೊತೆಯಾಗಿದೆ. ದಸರಾ ಉತ್ಸವದ ಕೊನೆ ಕ್ಷಣದ ತಯಾರಿಯಲ್ಲಿ ಮತ್ತೆ 5 ಆನೆಗಳು ದಸರಾ ಗಜಪಡೆಯನ್ನ ಸೇರಿಕೊಂಡಿದೆ. ಹೀಗೆ 14 ಆನೆಗಳು ಅರಮನೆ ಆವರಣ ತಲುಪಿದ್ದು ಮುಂದಿನ ದಿನಗಳಲ್ಲಿ ಭರ್ಜರಿ ತಾಲೀಮಿನ ಜೊತೆಗೆ ದಸರಾ ಉತ್ಸವಕ್ಕೆ ಆನೆಗಳು ಸಿದ್ಧವಾಗಲಿದೆ.