ಪ್ರತಿನಿಧಿ ವರದಿ ಕೊಳ್ಳೇಗಾಲ
2024ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇ.90.32 ರಷ್ಟು ಫಲಿತಾಂಶ ದೊರೆತಿದೆ.
ಕಾಲೇಜಿಗೆ ದಾಖಲಾಗಿದ್ದ 31 ವಿದ್ಯಾರ್ಥಿನಿಯರ ಪೈಕಿ 28 ಮಂದಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ 10 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಿಂದ ಉತ್ತೀರ್ಣರಾಗಿದ್ದು, ವಾಣಿಜ್ಯ ವಿಭಾಗದಿಂದ 8 ಮತ್ತು ಕಲಾ ವಿಭಾಗದಿಂದ 10 ವಿದ್ಯಾರ್ಥಿನಿಯರು ತೇರ್ಗಡೆಗೊಂಡಿದ್ದಾರೆ.
ಈ ನಡುವೆ ಪರೀಕ್ಷೆಯಲ್ಲಿ ಕಾಲೇಜಿನ 7 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಮತ್ತು ತಾಲೂಕಿಗೆ ಕೀರ್ತಿ ತಂದರೆ, 19 ಮಂದಿ ಪ್ರಥಮ ದರ್ಜೆ ಹಾಗೂ ಇಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಆರ್.ತೇಜಸ್ವಿನಿಗೆ 524, ಆರ್.ರಾಜಲಕ್ಷಿö್ಮ ಅವರಿಗೆ 519, ಎನ್.ಜ್ಯೋತಿಕಾ ಅವರಿಗೆ 518, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಎನ್.ಸ್ಪೂರ್ತಿಗೆ 539, ಎಸ್.ಸಂಜನ ಅವರಿಗೆ 518, ಎಂ.ಮಧುಶ್ರೀಗೆ 501 ಅಂಕಗಳು ದೊರೆತಿದ್ದು, ಕಲಾ ವಿಭಾಗದ ವಿದ್ಯಾರ್ಥಿಗಳಾದ ಎಂ.ಸ್ನೇಹ ಅವರಿಗೆ 513 ಮತ್ತು ಮಮತ ಅವರಿಗೆ 530 ಅಂಕ ದೊರೆತಿದೆ. ಅಂತೆಯೇ, ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ತುಬಾರ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಭಿನಂದಿಸಿದೆ.
12ಕೆಜಿಎಲ್-1
ಫೋಟೋ ಶೀರ್ಷಿಕೆ:
2024ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫೋಟೋ ಇದೆ.