ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಹಾಸನದ ಹಾಸನಾಂಬ ದೇವಿಯ ಜಾತ್ರೆಯ ಅಂಗವಾಗಿ ಕೇವಲ 12 ದಿನಗಳಿಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಭಕ್ತಾದಿಗಳಿಂದ ಭಾರಿ ಪ್ರಮಾಣದ ಬೆಂಬಲ ವ್ಯಕ್ತವಾಗಿದ್ದು, ದೇವಾಲಯದ ಹುಂಡಿಯಲ್ಲಿ ಬರೋಬ್ಬರಿ 8.72 ಕೋಟಿ ರೂ. ಹಣ ಸಂಗ್ರಹವಾಗಿದೆ. ಇನ್ನು ದೇವಾಲಯದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 6.15 ಕೋಟಿ ರೂ. ಆದಾಯ ಗಳಿಸಿತ್ತು. ಹಾಸನಾಂಬ ದೇವಿಯ 2023ರ ಜಾತ್ರಾ ಮಹೋತ್ಸವದಿಂದ ಸುಮಾರು 15 ಕೋಟಿ ರೂ. ಆದಾಯ ಬಂದಿದೆ.
ಹಾಸನದ ಹಾಸನಾಂಬ ದೇವಿಯ ಜಾತ್ರೆಯ ಅಂಗವಾಗಿ ಕೇವಲ 12 ದಿನಗಳಿಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಭಕ್ತಾದಿಗಳಿಂದ ಭಾರಿ ಪ್ರಮಾಣದ ಬೆಂಬಲ ವ್ಯಕ್ತವಾಗಿದ್ದು, ದೇವಾಲಯದ ಹುಂಡಿಯಲ್ಲಿ ಬರೋಬ್ಬರಿ 8.72 ಕೋಟಿ ರೂ. ಹಣ ಸಂಗ್ರಹವಾಗಿದೆ.