ಬೆಂಗಳೂರು, ನ.29: ಬೆಂಗಳೂರು ನಗರದ ಹಲವೆಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನಂತಹ ವಿದ್ಯುತ್ ಸರಬರಾಜು ಕಂಪನಿಗಳು ಕೆಲವೆಡೆ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವುದರಿಂದ ಇಂದು(ನ.29) ಬೆಂಗಳೂರಿನ ಉತ್ತರ ಭಾಗದ ಹಲವೆಡೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಾಗೇ ನಾಳೆ (ನ.30) ಕೂಡ ಬೆಂಗಳೂರಿನ ಹಲವೆಡೆ ವಿದ್ಯುತ್ ಸಮಸ್ಯೆ ಎದುರಾಗಲಿದೆ.
ನವೆಂಬರ್ 29ರ ಬುಧವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಬೆಂಗಳೂರಿನ ಉತ್ತರ ಭಾಗದ ಹಲವೆಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಸಹಕಾರನಗರ ಎ, ಬಿ, ಡಿ, ಇ, ಎಫ್ ಮತ್ತು ಜಿ ಬ್ಲಾಕ್, ಅಮೃತಹಳ್ಳಿ, ತಲಕಾವೇರಿ ಲೇಔಟ್, ಬಿಜಿಎಸ್ ಲೇಔಟ್, ನವ್ಯನಗರ, ಜಿಕೆವಿಕೆ ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಕೆಂಪಾಪುರ, ಟೆಲಿಕಾಂ ಲೇಔಟ್, ಸಿಂಗಹಳ್ಳಿ 2ನೇ ಹಂತ, ವೆಂಕಟೇಶ್ವರನಗರ, ಕಳ್ಳಿಪಾಳ್ಯ, ಅತ್ತೂರು ಲೇಔಟ್, ತಿರುಮನಹಳ್ಳಿ, ಯಶೋಧಾ ನಗರ, ಗೋಪಾಲಪ್ಪ ಲೇಔಟ್, ಆರ್ಎಂಝಡ್ ಅಜೂರ್ ಬಡಾವಣೆ, ಬ್ರಿಗೇಡ್ ಕ್ಯಾಲಾಡಿಯಂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನವೆಂಬರ್ 30ರ ಗುರುವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಕೋಡಿಹಳ್ಳಿ, ಮಧುರೆ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಕಾಡನೂರು, ಮಡುಗೊಂಡನಹಳ್ಳಿ, ಮಲ್ಲಪಾಡಿಗಟ್ಟ, ತಿಮ್ಮಸಂದ್ರ, ವಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ದ್ಯಾನಬಾವನಹಳ್ಳಿ, ದ್ಯಾನಬಾಳವನಹಳ್ಳಿ , LM ವಿಂಡ್, ಸೋಂಪುರ ಕೈಗಾರಿಕಾ ಪ್ರದೇಶ, ಭಾರತೀಪುರ ಕಾಲೋನಿ, ದಾಬಸ್ಪೇಟೆ ಕಿಯಾಡ್ಬಿ ಕೈಗಾರಿಕಾ ಪ್ರದೇಶ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆಟಿಎನ್ ಹಳ್ಳಿ, ಪಿಲಾಲಿ, ರಂಗನಾಥಪುರ, ಅಡ್ಡಗಲ್, ರಾಯಲಪಾಡು ಮತ್ತು ಗೌನಿಪಲ್ಲಿ.