ಬೆಂಗಳೂರು, (ಡಿಸೆಂಬರ್ 01): ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ಪೋಷಕರಿಗೆ ಆತಂಕ ಹೆಚ್ಚಿಸಿದೆ. ಈ ರೀತಿ ಆಗಾಗಿ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದ ಉದಾಹರಣಗಳು ಇವೆ. ಆದ್ರೆ, ಈ ಬಾರಿ ಬರೋಬ್ಬರಿ 44 ಶಾಲೆಗಳಿಗೆ ಬಂದಿದೆ. ಮುಖ್ಯವಾಗಿ ಬೆದರಿಕೆ ಇಮೇಲ್ನಲ್ಲಿ ಉಗ್ರವಾದ ಪದಗಳ ಉಲ್ಲೇಖವಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ನು ಸುರಕ್ಷತಾ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಮನೆಗೆ ಕಳುಹಿಸುತ್ತಿದೆ. ಕೆಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ, ಯಾವೆಲ್ಲಾ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ ಎನ್ನುವ ಪಟ್ಟಿ ಇಲ್ಲಿದೆ.
ಮೊದಲು 15 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ. ಬಳಿಕ ಇನ್ನುಳಿದ ಆಡಳಿತ ಮಂಡಳಿಗಳು ತಮ್ಮ ತಮ್ಮ ಶಾಲೆಯ ಇಮೇಲ್ ಪರಿಶೀಲನೆ ಮಾಡಿದ ಬಳಿಕ 44 ಶಾಲೆಗಳಿಗೆ ಇಮೇಲ್ ಬೆದರಿಕೆ ಬಂದಿತ್ತಿ. ಇದೀಗ ಸಾಕಷ್ಟು ಶಾಲೆಗಳ ಆಡಳಿತ ಮಂಡಳಿ ಮೇಲ್ ಚೆಕ್ ಬಳಿಕ ಬಯಲಾಗುತ್ತಿದ್ದು, ಸಮಯ ಕಳೆದಂತೆ ಬೆದರಿಕೆ ಹಾಕಿದ ಶಾಲೆಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಯಾವ ವಯಲದಲ್ಲಿ ಎಷ್ಟು ಶಾಲೆಗಳಿಗೆ ಬೆದರಿಕೆ?
- ಬೆಂಗಳೂರಿನ ಉತ್ತರ ವಲಯ -1ರಲ್ಲಿ 4 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ.
- ಬೆಂಗಳೂರಿನ ಉತ್ತರ ವಲಯ – 2ರಲ್ಲಿ 2 ಶಾಲೆಗಳಿಗೆ
- ಬೆಂಗಳೂರಿನ ಉತ್ತರ ವಲಯ -4: 01 ಶಾಲೆ.
ಬೆಂಗಳೂರಿನ ದಕ್ಷಿಣ ವಲಯ – 1: 15 ಶಾಲೆಗಳಿಗೆ ಬೆದರಿಕೆ ಇಮೇಲ್ಬೆಂಗಳೂರಿನ ದಕ್ಷಿಣ ವಲಯ – 2: 03 ಶಾಲೆಗಳು. ಬೆಂಗಳೂರಿನ ದಕ್ಷಿಣ ವಲಯ – 3: 10 ಶಾಲೆಗಳು ಬೆಂಗಳೂರಿನ ದಕ್ಷಿಣ ವಲಯ 4: 04 ಶಾಲೆಗಳು
ಬನ್ನೇರುಘಟ್ಟದ 7 ಶಾಲೆಗಳಿಗೆ ಬಾಂಬ್ ಬೆದರಿಕೆ
- ಗ್ರೀನ್ ಹುಡ್ ಹೈಸ್ಕೂಲ್, ದಿನ್ನೇಪಾಳ್ಯ
- ಗ್ಲೋಬಲ್ ಇಂಟರ್ನ್ಯಾಷನಲ್ ಶಾಲೆ
- ರಾಯನ್ ಇಂಟರ್ನ್ಯಾಷನಲ್ ಶಾಲೆ
- ಆಲ್ ಬಷೀರ್ ಶಾಲೆ
- ದೀಕ್ಷಾ ಹೈಟ್ ಶಾಲೆ
- ಕಾಂಡರ್ ಇಂಟರ್ನ್ಯಾಷನಲ್ ಶಾಲೆ
- ಬಿವಿಎಂ ಗ್ಲೋಬಲ್ ಶಾಲೆ
ಹೆಬ್ಬಗೋಡಿಯ ನಾಲ್ಕು ಶಾಲೆಗಳಿಗೆ ಹುಸಿಬಾಂಬ್
- ಡಿವೈನ್ ಇಂಟರ್ನ್ಯಾಷನಲ್ ಶಾಲೆ
- ಟ್ರೀಮೈಸ್ ಇಂಟರ್ನ್ಯಾಷನಲ್ ಶಾಲೆ
- ಫ್ಲಾರೆನ್ಸ್ ಇಂಟರ್ನ್ಯಾಷನಲ್ ಶಾಲೆ
- ಎಬೆನ್ಸರ್ ಇಂಟರ್ನ್ಯಾಷನಲ್ ಶಾಲೆ
ಸರ್ಜಾಪುರದ ಐದು ಶಾಲೆಗಳಿಗೆ ಬಾಂಬ್ ಬೆದರಿಕೆ
- ಗ್ರೀನ್ ಹುಡ್ ಇಂಟರ್ನ್ಯಾಷನಲ್ ಹೈಸ್ಕೂಲ್
- ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ
- ಓಕರಿಡ್ಜ್ ಶಾಲೆ
- ಟಿ ಐ ಎಸ್ ಬಿ ಶಾಲೆ
- ಇನ್ವೆಂಚರ್ ಅಕಾಡೆಮಿ
ಜಿಗಣಿಯ ಎರಡು ಶಾಲೆಗಳಿಗೆ ಹುಸಿ ಬಾಂಬ್
- ಅಚೀವರ್ಸ್ ಅಕಾಡೆಮಿ
- ಎನ್ಡೆವರ್ಸ್ ಅಕಾಡೆಮಿ
ಅನೇಕಲ್ನ 05 ಶಾಲೆಗಳಿಗೆ ಸೇರಿದಂತೆ ಒಟ್ಟು 44 ಖಾಸಗಿ ಶಾಲೆಗಳ ಇಮೇಲ್ಗೆ ಬಾಂಬ್ ಬೆದರಿಕೆ ಬಂದಿದೆ.