COP28 ಎಂದು ಕರೆಯಲ್ಪಡುವ ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು . ಇಲ್ಲಿ ಮೋದಿ ಅವರನ್ನು ಭೇಟಿಯಾದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು, ಮೋದಿಯೊಂದಿಗೆ ಸೆಲ್ಪಿ ತೆಗೆದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು “COP28 ನಲ್ಲಿ ಉತ್ತಮ ಸ್ನೇಹಿತ” ಎಂದು ಶೀರ್ಷಿಕೆ ನೀಡಿ ಬಣ್ಣಿಸಿದ್ದಾರೆ.
ಈ ಸಮಾವೇಶದಲ್ಲಿ ಜಗತ್ತಿನ ಹಲವು ನಾಯಕರು ಭಾಗಿಯಾಗಿದ್ದಾರೆ. ಈ ಪೈಕಿ ಪ್ರಧಾನಿ ಮೋದಿ ಕೂಡ ಒಬ್ಬರು. ಅಲ್ಲಿ ತೆಗೆದ ಫೋಟೋವನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ಸಾಮಾಜಿಕ ಜಾಲತಾಣವಾದ ಇನ್ಸ್ಟಗ್ರಾಮ್ ಪೋಸ್ಟ್ ನಲ್ಲಿ ‘ಮೆಲೋಡಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿರುವುದು ಇಂಟರ್ನೆಟ್ನಲ್ಲಿ ಬಹಳ ಟ್ರೆಂಡಿಂಗ್ ಆಗಿದೆ.
ಪೋಸ್ಟ್ ಮಾಡಿದ 13 ಗಂಟೆಯ ಒಳಗೆ ಛಾಯಾಚಿತ್ರವು 4 ಲಕ್ಷದ 50 ಸಾವಿರ ಲೈಕ್ ಪಡೆದು 30 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ ಫೇಜ್ಗಳು ಇವರ ಚಿತ್ರಣಗಳಿಗೆ ಪ್ರಸಿದ್ಧ ಹಾಡುಗಳನ್ನು ಸೇರಿಸಿ ಮತಷ್ಟು ರಂಗೇರಿಸುತ್ತಿದ್ದಾರೆ.