ಪ್ರಾಚೀನ ಕಾಲದಲ್ಲಿ, ಮಾನವರು ತಮ್ಮ ಸಂಪತ್ತನ್ನು ಮಣ್ಣಿನ ಮಡಕೆಗಳಲ್ಲಿ ಹೂತಿಡುತ್ತಿದ್ದರು ಎಂಬುವುದು ವಾಡಿಕೆ. ಅದರಂತೆ ಪೂರ್ವಜರ ಇತಿಹಾಸ ಮತ್ತು ವೈಭವವನ್ನು ತಿಳಿಸುವ ವಿವಿಧ ವಸ್ತುಗಳು ನಮಗೆ ಆಗಾಗ ಪತ್ತೆಯಾಗುತ್ತಿರುತ್ತವೆ.ಇತಂಹ ನಿಧಿಗಳು ಕೆಲವೊಮ್ಮೆ ಭೂಮಿಯ ಕೆಳಗಿನ ಪದರಗಳಲ್ಲಿ,ಸಮುದ್ರದಲ್ಲಿ ಪತ್ತೆಯಾಗಿ ಅವುಗಳನ್ನು ಶೋಧಿಸಿ ಹೊರ ತೆಗೆದಾಗ ಬೆಲೆಬಾಳುವ ಒಡವೆಗಳು ಮತ್ತು ರತ್ನಗಳು ಪತ್ತೆಯಾಗುತ್ತವೆ. ಹೀಗೊಂದು ಘಟನೆ ಈಗ ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ.
ಪತ್ತೆಯಾದ ನಿಧಿಯು ಬರೋಬ್ಬರಿ 2,000 ವರ್ಷಗಳಷ್ಟು ಹಳೆಯದಾದ ನಾಣ್ಯಗಳನ್ನು ಒಳಗೊಂಡಿರುವ ಅತ್ಯಂತ ಅಪರೂಪದ್ದು, ಹಾಗೂ ನಾಣ್ಯಗಳ ಬಣ್ಣವು ಸಂಪೂರ್ಣವಾಗಿ ಹಸಿರು ಬಣ್ಣದಲ್ಲಿದೆ, ಶತಮಾನಗಳಿಂದಲೂ ಈ ನಾಣ್ಯಗಳು ಪೆಟ್ಟಿಗೆಯಲ್ಲಿ ಉಳಿದುಕೊಂಡಿದ್ದರಿಂದ ಅವು ದೊಡ್ಡ ಗುಂಡು ಕಲ್ಲಾಗಿ ಮಾರ್ಪಟ್ಟವು. ಈ ನಿಧಿಯು ಪುರಾತತ್ತ್ವಜ್ಞರ ಪ್ರಕಾರ ಸುಮಾರು 5.5 ಕಿಲೋಗಳಷ್ಟು ತೂಗುತ್ತದೆ ಹಾಗೂ ಅದು ಕುಶಾನು ಕಾಲದ (Buddhist) ಸಂಪತ್ತು ಎಂದು ಭಾವಿಸಲಾಗಿದೆ.
ಈ ನಿಧಿಯಲ್ಲಿನ ಅನೇಕ ನಾಣ್ಯಗಳು ತಾಮ್ರದಿಂದ ಮಾಡಲ್ಪಟ್ಟಿದೆ. ಇದು ಬೌದ್ಧ ದೇವಾಲಯಗಳ ಗೋರಿಗಳಲ್ಲಿ ಕಂಡುಬಂದಿದೆ. ಲೈವ್ ಸೈನ್ಸ್ ಈ ನಿಧಿಗೆ ಸಂಬಂಧಿಸಿದ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಮಧ್ಯ ಆಗ್ನೇಯ ಪಾಕಿಸ್ತಾನದಲ್ಲಿ ಕ್ರಿ.ಪೂ. 2600 ರ ಮೊಹೆಂಜೋದಾರೋ ಕಾಲದ ಬೃಹತ್ ರಚನೆಗಳಲ್ಲಿ ಇದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಈ ನಿಧಿಯ ಬಗ್ಗೆ ಪುರಾತತ್ವಶಾಸ್ತ್ರಜ್ಞ, ಮಾರ್ಗದರ್ಶಿ ಶೇಖ್ ಜಾವೇದ್ ಅಲಿ ಸಿಂಧಿ ಅವರು, “ ಇದು ಮೊಹೆಂಜೋದಾರೋ ಪತನದ ನಂತರದ, ಸುಮಾರು 1600 ವರ್ಷಗಳಷ್ಟು ಹಳೆಯದು. ಅದರ ನಂತರ ಬಂಡೆಗಳ ಮೇಲೆ ಸ್ತೂಪವನ್ನು ನಿರ್ಮಿಸಲಾಯಿತು ಎಂದಿದ್ದಾರೆ. ಈ ನಾಣ್ಯಗಳನ್ನು ಪತ್ತೆ ಮಾಡಿದ ತಂಡದಲ್ಲಿ ಶೇಖ್ ಜಾವೇದ್ ಕೂಡ ಒಬ್ಬರು” ಎಂದು ತಿಳಿಸಿದ್ದಾರೆ.