ಇಸ್ರೋದ ಹೆಮ್ಮೆಯ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ತರಂಗಾಂರಗಳಲ್ಲಿ ಸೂರ್ಯನ ಆರಂಭಕ ಸಂಪೂರ್ಣ ಚಿತ್ರಗಳನ್ನು ಸೆರೆಹಿಡಿದಿದೆ. ಈ ಬಗ್ಗೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಿಂದ ಫೋಟೋ ಜೊತೆಗೆ ಪೋಸ್ಟ್ ಮಾಡಿದೆ.
ಶುಕ್ರವಾರ (ಡಿಸೆಂಬರ್ 8, 2023), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಸೋಲಾರ್ ಅಲ್ಟ್ರಾ ವಯೊಲೆಟ್ ಇಮೇಜ್ ಟೆಲಿಸ್ಕೋಪ್- ಎಸ್ಯುಐಟಿ) ಸೂರ್ಯನ ಡಿಸ್ಕ್ನ ಆರಂಭಿಕ ಸಂಪೂರ್ಣ ಚಿತ್ರಗಳನ್ನು ಸೆರೆಹಿಡಿಯುವ ಶ್ಲಾಘನೀಯ ಸಾಧನೆಯನ್ನು ಮಾಡಿದೆ ಎಂಬ ರೋಮಾಂಚಕಾರಿ ವಿಷಯವನ್ನು ಬಹಿರಂಗಪಡಿಸಿದೆ.
ಚಿತ್ರಗಳು 200-400 ನ್ಯಾನೋ ಮೀಟರ್ ತರಂಗಾಂತರದ ವ್ಯಾಪ್ತಿಯಲ್ಲಿ ಸೂರ್ಯನ ಪೂರ್ಣ-ಡಿಸ್ಕ್ ಚಿತ್ರಣಗಳನ್ನು ಯಶಸ್ವಿಯಾಗಿ ದಾಖಲಿಸಿವೆ. ಇವುಗಳು ಇಸ್ರೋ ವಿಜ್ಞಾನಿಗಳಿಗೆ ಜಾಗತಿಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಮುನ್ನಡೆಯನ್ನು ಒದಗಿಸುತ್ತವೆ. ಸೌರ ದ್ಯುತಿಗೋಳ ಮತ್ತು ವರ್ಣಗೋಳಗಳ ಸಂಕೀರ್ಣ ವಿವರಗಳ ಬಗ್ಗೆ ಪ್ರಪ್ರಥಮ ಒಳನೋಟಗಳನ್ನು ನೀಡುತ್ತಿದೆ. ಅಲ್ಲದೆ ನೇರಳಾತೀತ ಕಿರಣಗಳಿಗೆ ಹತ್ತಿರದ ಸೌರ ವಿಕಿರಣ ವ್ಯತ್ಯಾಸಗಳನ್ನು ಅಳೆಯಲು ನೆರವಾಗುತ್ತದೆ.
Leave a comment