ವಿನಯ್ ಗೌಡ ಬಗ್ಗೆ ಕಿರುತೆರೆ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. 2015ರಲ್ಲಿ ‘ಸೂಪರ್ ಜೋಡಿ’ ರಿಯಾಲಿಟಿ ಶೋನಲ್ಲಿ ವಿನಯ್ ದಂಪತಿ ಮತ್ತು ಇಳಾ ದಂಪತಿ ಕೂಡ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ವಿನಯ್ ನಡವಳಿಕೆ ಬಗ್ಗೆ ಇಳಾ ಮಾತನಾಡಿದ್ದಾರೆ.
ವಿನಯ್ ಗೌಡ ಬಗ್ಗೆ ನಟಿ ಇಳಾ ವಿಟ್ಲ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದು, ಈಗ ವೈರಲ್ ಆಗುತ್ತಿದೆ. “ಬಿಗ್ ಬಾಸ್ ನೋಡ್ತಿರೋ ಕಾರಣ ವಿನಯ್ ಅವರನ್ನ ಹತ್ತಿರದಿಂದ ನೋಡಿ ಅನುಭವಿಸಿರೋದಕ್ಕೆ ಈ ಪೋಸ್ಟ್ ಮಾಡುತ್ತಾ ಇದ್ದೇನೆ ಎಂದು ನಟಿ ಬರೆದಿರುವ ಜೊತೆಗೆ ನನಗೇನಾದರೂ ಆದರೆ ನಾನು ಸುಮ್ನೆ ಬಿಡಲ್ಲ ಅಂತಾನೆ ಇರ್ತಾರಲ್ವಾ, ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತೆ ಸ್ವಲ್ಪ ಸ್ವಲ್ಪ ಗಾಯಗಳು ಆಗುತ್ತೆ ಅದು ಸರ್ವೇಸಾಮಾನ್ಯ . ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ ನಾನು ಗೆಲ್ಲಲೇ ಬೇಕು ಅನ್ನೋ ಮನಸ್ಥಿತಿ ಇರೋದು ಯಾವತ್ತಿಗೂ ಉದ್ದಾರ ಆಗಿಲ್ಲ. ರಿಯಾಲಿಟಿ ಶೋ ನೇ ಹಾಗೆ ಏನು ಮಾಡಕ್ಕಾಗಲ್ಲ ಇಷ್ಟ ಇದ್ರೆ ಹೋಗ್ಬೇಕು ಇಲ್ಲ ಅಂದ್ರೆ ಸುಮ್ನಿರಬೇಕು ಎಂದಿದ್ದಾರೆ. ಇದೇ ವಿನಯ್, ಸೂಪರ್ ಜೋಡಿ ಟೈಮಲ್ಲಿ ಪ್ಲಾನ್ ಮಾಡಿಕೊಂಡು ಬಂದು ನನಗೇನಾದರೂ ಆದರೆ ನಾನು ಯಾರನ್ನೂ ಸುಮ್ಮನೆ ಬಿಡಲ್ಲ ಅಂತ ಹೆದರಿಸೋದು, ಆಮೇಲೆ ಅಂತ ಕೆಲಸ ಅವರೇ ಮಾಡೋದು ಎಂದು ಅಸಮಾಧಾನ ಹೊರ ಹಾಕಿದ್ದಾರೆ. ವಿನಯ್ ಆಟದಲ್ಲಿ ನಮ್ಮ ಯಜಮಾನರ ದವಡೆ ಹಲ್ಲು ಮುರಿದ್ರು, ಅಷ್ಟು ಸಾಲದು ಅಂತ ರಿಬ್ಬು ಫ್ಯಾಕ್ಚರ್ ಮಾಡಿದ್ದರು. ಆದರೂ ನಾವು ಒಂದು ಮಾತೂ ಹೇಳಿಲ್ಲ. ಶೋ ಮುಗಿದ ಮೇಲೆ ನೋವು ಜಾಸ್ತಿ ಆಯ್ತು. ಆರು ತಿಂಗಳು ಸರಿಯಾಗಿ ಕೆಲಸ ಮಾಡುವುದಕ್ಕೆ ಆಗದೆ, ನನ್ನ ಪತಿ ಎಷ್ಟು ಒದ್ದಾಡಿದ್ದಾರೆ” ಎಂದು ನೋವು ಹೊರ ಹಾಕಿದ್ದಾರೆ