ಔಷಧ ತಯಾರಕರು ‘ಫಿಕ್ಸೆಡ್ ಡ್ರಗ್ ಕಾಂಬಿನೇಷನ್ ’ ಅನ್ನು ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ನೀಡುವಂತಿಲ್ಲ ಎಂದು ಉತ್ಪನ್ನಗಳ ಮೇಲೆ ಲೇಬಲ್ ಅಂಟಿಸುವಂತೆ ಔಷಧ ತಯಾರಕರಿಗೆ ಔಷಧ ನಿಯಂತ್ರಕ ಡಿಸೆಂಬರ್ 18ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ಮಕ್ಕಳಿಗೆ ಶೀತ ನಿರೋಧಕ ಔಷಧ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. ಶೀತ ನಿರೋಧಕ ಔಷಧದ ಸಂಯೋಜನೆಯ (ಫಿಕ್ಸೆಡ್ ಡ್ರಗ್ ಕಾಂಬಿನೇಷನ್) ಬಗ್ಗೆಯೂ ಚರ್ಚೆಗಳಾಗುತ್ತಿವೆ. ಸದ್ಯದ ಮಟ್ಟಿಗೆ ಚಿಕ್ಕಮಕ್ಕಳಿಗೆ ಅನುಮೋದಿತವಲ್ಲದ ಈ ಸಿರಪ್ ಅನ್ನು ನೀಡಬಾರದು ಎಂದು ಔಷಧ ನಿಯಂತ್ರಕ ಹೇಳಿದೆ.
ಕಳೆದ ವರ್ಷ ಗ್ಯಾಂಬಿಯಾ, ಉಜ್ಬೇಕಿಸ್ತಾನ್ ಮತ್ತು ಕ್ಯಾಮರೂನ್ನಲ್ಲಿ ಕನಿಷ್ಠ 141 ಮಕ್ಕಳು ಸಿರಪ್ ಸೇವನೆಯ ಪರಿಣಾಮ ಮೃತಪಟ್ಟಿದ್ದರು. 2019ರಿಂದಲೂ ಕಫ್ ಸಿರಪ್ಗಳಲ್ಲಿ ವಿಶಾಂಷ ಇರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಮಕ್ಕಳ ಸಾವಿನ ವಿಚಾರ ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು.
ಔಷಧ ತಯಾರಕರು ‘ಫಿಕ್ಸೆಡ್ ಡ್ರಗ್ ಕಾಂಬಿನೇಷನ್ (FDC)’ ಅನ್ನು ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ನೀಡುವಂತಿಲ್ಲ ಎಂದು ಉತ್ಪನ್ನಗಳ ಮೇಲೆ ಲೇಬಲ್ ಅಂಟಿಸುವಂತೆ ಔಷಧ ತಯಾರಕರಿಗೆ ಔಷಧ ನಿಯಂತ್ರಕ ಡಿಸೆಂಬರ್ 18ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.