ಕ್ರಿಸ್ಮಸ್ ಹಬ್ಬಕ್ಕೆ ಮುನ್ನ ಜನಸಾಮಾನ್ಯರಿಗೆ ಗಿಫ್ಟ್ ಸಿಕ್ಕಿದ್ದು, 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 39 ರೂ ಕಡಿಮೆ ಆಗಿದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ವ್ಯತ್ಯಯವಾಗಿಲ್ಲ. ವಿವಿಧ ನಗರಗಳಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಎಷ್ಟು ಎಂಬ ವಿವರ ಈ ಸುದ್ದಿಯಲ್ಲಿದೆ.ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಕೊಂಚ ನಿರಾಳ ತರುವ ಸುದ್ದಿ ಇದು. ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ ತುಸು ಇಳಿಕೆ ಆಗಿದೆ. 19 ಕಿಲೋ ಕಮರ್ಷಿಯಲ್ ಎಲ್ ಪಿಜಿ ಸಿಲಿಂಡರ್ ಬೆಲೆ 39 ರೂನಷ್ಟು ಕಡಿಮೆ ಆಗಿದೆ. ರಾಷ್ಟ್ರರಾಜಧಾನಿ ನಗರಿ ದೆಹಲಿಯಲ್ಲಿ 1796.50 ರೂ ಇದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ 1757.50 ರುಪಾಯಿಗೆ ಇಳಿದಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಕಡೆಯೂ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಮುಖವಾಗಿದೆ. ಆದರೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ವ್ಯತ್ಯಯವಾಗಿಲ್ಲ.
ಎರಡೂವರೆ ತಿಂಗಳ ಅಂತರದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ನಾಲ್ಕು ಬಾರಿ ಬದಲಾವಣೆ ಆಗಿದೆ. ನವೆಂಬರ್ 1ರಂದು ನೂರು ರೂಗೂ ಹೆಚ್ಚು ಬೆಲೆ ಏರಿಕೆ ಆಗಿತ್ತು. ನವೆಂಬರ್ 16ರಂದು 50ಕ್ಕೂ ಹೆಚ್ಚು ರುಪಾಯಿಯಷ್ಟು ಬೆಲೆ ಇಳಿಸಲಾಯಿತು. ಡಿಸೆಂಬರ್ 1ರಂದು 21 ರೂನಷ್ಟು ಬೆಲೆ ಏರಿಕೆ ಆಯಿತು. ಬಳಿಕ ಇದೀಗ 39 ರೂ ಕಡಿಮೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಡಿಸೆಂಬರ್ 1ರಂದು ಪರಿಷ್ಕರಿಸಲಾದ ದರದ ಪ್ರಕಾರ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 1833 ರುಪಾಯಿ ಇದೆ. ಇದೀಗ 1,800 ರೂಗಿಂತ ಕಡಿಮೆಗೆ ಬೆಲೆ ಇಳಿದಿದೆ