ನವದೆಹಲಿ, ಜ 16: ಸರ್ಕಾರಿ ನಿಯಂತ್ರಣದ ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ ಕಾರ್ಪೊರೇಶನ್ (ESIC- Employees’ State Insurance Corporation) 2023ರ ನವೆಂಬರ್ ತಿಂಗಳಲ್ಲಿ 15.92 ಲಕ್ಷ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿದೆ. ಇಎಸ್ಐಸಿ ವ್ಯಾಪ್ತಿಗೆ ಆ ತಿಂಗಳಲ್ಲಿ 20,830 ಹೊಸ ಸಂಸ್ಥೆಗಳು ಸೇರಿವೆ. ಇಂದು ಮಂಗಳವಾರ (ಜ. 16) ಬಿಡುಗಡೆ ಮಾಡಲಾದ ದತ್ತಾಂಶದ ಪ್ರಕಾರ, ಇಎಸ್ಐಸಿಗೆ ಸೇರ್ಪಡೆಯಾದ 15.92 ಲಕ್ಷ ಹೊಸ ಉದ್ಯೋಗಿಗಳ ಪೈಕಿ ಶೇ 47ರಷ್ಟು ಮಂದಿ 25 ವರ್ಷ ವಯೋಮಾನಕ್ಕೆ ಸೇರಿದವರಾಗಿದ್ದಾರೆ. 7.47 ಲಕ್ಷ ಹೊಸ ಸದಸ್ಯರು 24 ವರ್ಷದೊಳಗಿನ ವಯಸ್ಸಿನವರೇ ಆಗಿದ್ದಾರೆ.
ಇನ್ನು, ಇಎಸ್ಐಸಿಗೆ ಹೊಸ ಸದಸ್ಯತ್ವ ಪಡೆದವರ ಪೈಕಿ ಮಹಿಳಾ ಉದ್ಯೋಗಿಗಳ ಸಂಖ್ಯೆ 3.17 ಲಕ್ಷ ಇದೆ. ಹಾಗೆಯೇ, 58 ಲಿಂಗ ಪರ್ತಿತ ವ್ಯಕ್ತಿಗಳೂ ಇದರಲ್ಲಿ ಇದ್ದಾರೆ.