ಬೆಂಗಳೂರು, ಜನವರಿ 24: ಲೋಕಸಭೆ ಚುನಾವಣೆಗೆ ದೇಶದಲ್ಲಿ ಅಖಾಡ ಸಿದ್ದವಾಗುತ್ತಿದೆ. ಈ ಬಾರಿ ಶತಾಯಗತಾಯ ಬಿಜೆಪಿಯನ್ನು ಹಣಿಯಲು ವಿರೋಧ ಪಕ್ಷಗಳು ಒಂದಾಗಿ ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿವೆ. ಈ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಆಯ್ಕೆ ಮಾಡಲಾಗಿದೆ. ಆದರೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ತವರು ಕ್ಷೇತ್ರದಲ್ಲೇ ಬಿಗ್ ಶಾಕ್ ನೀಡಲಾಗಿದೆ. ಅದು ಮಲ್ಲಿಕಾರ್ಜುನ್ ಖರ್ಗೆ ಅವರ ಆಪ್ತ ಕಾಂಗ್ರೆಸ್ ತೊರದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಿವೃತ್ತ ಕೆಎಎಸ್ ಅಧಿಕಾರಿ ರುದ್ರಯ್ಯ ಅವರು ಬಿಜೆಪಿ ಬಾವುಟ ಹಿಡಿದು ಕೇಸರಿ ಮನೆಯನ್ನು ಪ್ರವೇಶಿಸಿದ್ದಾರೆ