ಬೆಂಗಳೂರು : ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ ಮಾಡಿದ್ದು, ಓರ್ವ DySP ವರ್ಗಾವಣೆ ರದ್ದು ಮಾಡಿ 33 ಡಿವೈಎಸ್ಪಿಗಳು, 132 ಇನ್ಸ್ ಪೆಕ್ಟರ್ಗಳನ್ನು ವರ್ಗಾವಣೆ ಮಾಡಿದೆ. ಜೊತೆಗೆ ಹೊಸದಾಗಿ ಸೃಷ್ಟಿಯಾದ ಹುದ್ದೆಗಳಿಗೂ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಯು.ಡಿ.ಕೃಷ್ಣಕುಮಾರ್-ಡಿವೈಎಸ್ಪಿ, ಬಿಡಿಎ, ಬೆಂಗಳೂರು. ಟಿ.ಎಂ.ಶಿವಕುಮಾರ್-ಎಸಿಪಿ, ಮಡಿವಾಳ ಉಪವಿಭಾಗ. ಹೆಚ್.ಬಿ.ರಮೇಶ್ ಕುಮಾರ್-ACP, ವಿವಿ ಪುರಂ ಉಪವಿಭಾಗ. ಎಂ.ಎನ್.ನಾಗರಾಜ್-ಎಸಿಪಿ, ಸಿಸಿಬಿ ಬೆಂಗಳೂರು. ಅನುಷಾರಾಣಿ-ACP, ಡಿಸಿಆರ್ಇ, ಮೈಸೂರು ಸೇರಿದಂತೆ ಒಟ್ಟು 33 DySPಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.