ರಾಜಸ್ಥಾನದ ಪಾಲಿ ಜಿಲ್ಲೆಯ ಜಡಾನ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ʼಓಂ ಆಕಾರದ ಶಿವ ದೇವಾಲಯʼವು ಇದೀಗಾ ವಿಶ್ವದೆಲ್ಲಡೆ ಭಾರೀ ಸುದ್ದಿಯಲ್ಲಿದೆ. ಪ್ರಪಂಚದಲ್ಲೇ ಓಂ ಆಕಾರದಲ್ಲಿ ನಿರ್ಮಿಸಲಾದ ಮೊದಲ ದೇವಾಲಯ ಇದಾಗಿದೆ. 1995ರಲ್ಲಿ ಈ ಮಹಾ ದೇವಾಲಯದ ಶಂಕು ಸ್ಥಾಪನೆ ನಡೆದಿದ್ದು, ಈ ದೇವಾಲಯದ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ವರ್ಷ 2024 ಮುಗಿಯುವುದರೊಳಗೆ ದೇವಾಲಯದ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.
250 ಎಕರೆ ಜಾಗದಲ್ಲಿ ಓಂ ಆಕಾರದ ಈ ಶಿವ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಫೆಬ್ರವರಿ 10-19 ರ ನಡುವೆ ನಡೆಯಲಿದೆ ಎಂದು ವರದಿಯಾಗಿದೆ. ಈ ಶಿವ ದೇವಾಲಯದಲ್ಲಿ 1008 ವಿವಿಧ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದ್ದು,ಈ ಓಂ ಆಕಾರದ ದೇವಾಲಯದ ಆವರಣದಲ್ಲಿ 108 ಕೊಠಡಿಗಳಿವೆ. ಇದರ ಗೋಪುರವು 135 ಅಡಿ ಎತ್ತರವಾಗಿದೆ ಮತ್ತು ದೇವಾಲಯದ ಮಧ್ಯಭಾಗದಲ್ಲಿ ಗುರು ಮಹಾರಾಜ್ ಸ್ವಾಮಿ ಮಾಧವಾನಂದರ ಸಮಾಧಿ ಇದೆ. ಮೇಲ್ಭಾಗದಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದೆ.