ವುಮೆನ್ಸ್ ಪ್ರೀಮಿಯರ್ ಲೀಗ್ನ 10ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ ಗುಜರಾತ್ ಜೈಂಟ್ಸ್. ಅಂದರೆ ಈ ಬಾರಿ ಆಡಿರುವ 3 ಪಂದ್ಯಗಳಲ್ಲೂ ಗುಜರಾತ್ ತಂಡವು ಸೋಲನುಭವಿಸಿದ್ದು, ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ.
ಅತ್ತ ಮೊದಲ ಪಂದ್ಯದಲ್ಲಿ ವಿರೋಚಿತ ಸೋಲುಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆ ಬಳಿಕ ಆಡಿದ 2 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಡೆಯಿಂದ ಗುಜರಾತ್ ಜೈಂಟ್ಸ್ಗೆ ಕಠಿಣ ಪೈಪೋಟಿ ಎದುರಾಗಲಿದೆ ಎಂದೇ ಹೇಳಬಹುದು.
ಇನ್ನು ಉಭಯ ತಂಡಗಳು ಇದುವರೆಗೆ 2 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಒಮ್ಮೆ ಗುಜರಾತ್ ಜೈಂಟ್ಸ್ ಗೆದ್ದರೆ, ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ದಾಖಲಿಸಿದೆ.
ಗುಜರಾತ್ ಜೈಂಟ್ಸ್ (GG) ತಂಡ: ಆಶ್ಲೀಗ್ ಗಾರ್ಡ್ನರ್*, ಬೆತ್ ಮೂನಿ (ನಾಯಕಿ), ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್*, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್, ಫೋಬೆ ಲಿಚ್ಫೀಲ್ಡ್*, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಪ್ರಿಯಾ ಮಿಶ್ರಾ, ಲಾರೆನ್ ಚೀಟಲ್*, ಕ್ಯಾಥರಿನ್ ಬ್ರೈಸ್*, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್, ವೇದಾ ಕೃಷ್ಣಮೂರ್ತಿ.
ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ: ಆಲಿಸ್ ಕ್ಯಾಪ್ಸೆ*, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್*, ಲಾರಾ ಹ್ಯಾರಿಸ್*, ಮರಿಜಾನ್ನೆ ಕಪ್*, ಮೆಗ್ ಲ್ಯಾನಿಂಗ್ (ನಾಯಕಿ), ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು, ಅನ್ನಾಬೆಲ್ ಸದರ್ಲ್ಯಾಂಡ್*, ಅಪರ್ಣಾ ಮೊಂಡಲ್, , ಅಶ್ವನಿ ಕುಮಾರಿ.