ಮಂಡ್ಯ : ಕಾಂಗ್ರೆಸ್ನಲ್ಲಿ ಟಿಕೆಟ್ ಪಡೆಯಲು ದುಡ್ಡೆ ಮಾನದಂಡ. ಹಣ ಇದ್ದವರನ್ನು ಪಕ್ಷಕ್ಕೆ ಕೆರದುಕೊಂಡು ಬರುತ್ತಾರೆ. ವಿಧಾನಸಭೆ ಚುನಾವಣೆ ವೇಳೆ ಆಕಾಂಕ್ಷಿತರೆಲ್ಲ ಟಿಕೆಟ್ಗಾಗಿ ಒಂದು ಲಕ್ಷ ಹಣ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಡಾ.ಹೆಚ್.ಎನ್.ರವೀಂದ್ರ ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ, ನಾನು ಸ್ಪರ್ಧಿಸಿದ್ದರೂ ಚಲುವರಾಯಸ್ವಾಮಿ ಗೆಲ್ಲಲು ಬಿಡಲ್ಲ ಅಂತ ಹೇಳಿದ್ದೆ. ನನ್ನ ಮತ್ತೊಬ್ಬ ಆಕಾಂಕ್ಷಿಗೆ ನೀನೆ ನಿಲ್ಲು ಬೆಂಬಲ ನೀಡುತ್ತೇನೆ ಎಂದು ಹೇಳಿದ್ದೆ. ವಿಧಾನಸಭೆ ಚುನಾವಣೆ ವೇಳೆ ಸಚಿವ ಚಲುವರಾಯಸ್ವಾಮಿ ನನ್ನ ವಿರುದ್ಧ ಒಬ್ಬರನ್ನ ಎತ್ತಿ ಕಟ್ಟಿದ್ದರು. ಗಣಿಗ ರವಿಕುಮಾರ್ ಟಿಕೆಟ್ ವಿಚಾರವಾಗಿ ಚಲುವರಾಯಸ್ವಾಮಿಗೆ ಬೈದಿದ್ದೆ. ಇದರಿಂದ ನನ್ನ ಹಾಗೂ ಚಲುವರಾಯಸ್ವಾಮಿ ನಡುವೆ ಮನಸ್ತಾಪ ಕೂಡ ಆಗಿತ್ತು, ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷ ಗೆಲ್ಲಿಸಿದರು. ಸರ್ಕಾರ ರಚನೆಯಾಗಿ ಚಲುವರಾಯಸ್ವಾಮಿ ಮಂತ್ರಿಯಾದರು. ಅವರು ನನಗೆ ಕರೆ ಮಾಡಿ ಎಲ್ಲಾ ಬಿಟ್ಟು ಕೆಲಸ ಮಾಡೋಣ ಅಂತ ಹೇಳಿದರು. ಲೋಕಸಭೆ ಚುನಾವಣೆಗೆ ಚಲುವರಾಯಸ್ವಾಮಿ ನನ್ನ ಹೆಸರು ಸೂಚಿಸಿದ್ದರು. ಆದರೆ ಕಾಂಗ್ರೆಸ್ನಲ್ಲಿ ಟಿಕೆಟ್ ಪಡೆಯಲು ಮಾನದಂಡ ಅಂದರೆ ಅದು ಹಣ. ಏಳು ಜನ ಶಾಸಕರು ಇದ್ದಾರೆ, ದುಡ್ಡು ಇರುವವರು ಗೆದ್ದೇ ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ ಎಂದು ಹೇಳಿದರು.