ಮಾರ್ಚ್ 8 ರ ಸಂಜೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ತಂಗಿದ್ದರು. ಇಂದು ಬೆಳಗ್ಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿ ಮಾಡಿದರು. ಆನೆಯ ಮೇಲೆ ಸವಾರಿ ಮಾಡುತ್ತಾ ಸೂರ್ಯೋದಯದ ಸುಂದರ ದೃಶ್ಯವನ್ನೂ ವೀಕ್ಷಣೆ ಮಾಡಿದರು. ಪ್ರಧಾನಿ ಮೋದಿ ಇಂದು ಅಸ್ಸಾಂನಲ್ಲಿ 18 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಹಾನ್ ಅಹೋಮ್ ಕಮಾಂಡರ್ ಲಚಿತ್ ಬೊರ್ಫುಕನ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ಸಹ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ದೇಶದ ಅತ್ಯಂತ ಸುಂದರವಾದ ಉದ್ಯಾನವನಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಉದ್ಯಾನವನಕ್ಕೆ ಬರುವವರು ಖಂಡಿತವಾಗಿಯೂ ಇಲ್ಲಿ ಸಫಾರಿಯನ್ನು ಆನಂದಿಸುತ್ತಾರೆ. ಅಸ್ಸಾಂನಲ್ಲಿರುವ ಈ ರಾಷ್ಟ್ರೀಯ ಉದ್ಯಾನವನವನ್ನು ಭೇಟಿ ಮಾಡಲು ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.