ಕಾರವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ನೌಕಾನೆಲೆಯ ಎನ್ಸಿಸಿ ಗುತ್ತಿಗೆ ಕಂಪನಿ ಕಾರ್ಮಿಕರ ಶೆಡ್ನಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಒಂದು ಸಾಲಿನ ನಾಲ್ಕೈದು ಶೆಡ್ಗಳಿಗೆ ಬೆಂಕಿ ತಗುಲಿದೆ. ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ 150 ಕ್ಕೂ ಅಧಿಕ ಶೆಡ್ಗಳಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಶಿಬ್ಬಂದಿ ಬೆಂಕಿ ನಂದಿಸಿದ್ದಾರೆ.