ಮೈಸೂರು : ಇಂದು ಸಿಎಂ ಸಿದ್ದರಾಮಯ್ಯ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಗೆ ಮೈಸೂರು ಜಿಲ್ಲಾಡಳಿತದ ವತಿಯಿಂದ ಸ್ವಾಗತ ಕೋರಲಾಯಿತು. ಬಳಿಕ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕಾರ ಮಾಡಿದ ಸಿಎಂ ಗೆ ಸಚಿವ ಮಹದೇವಪ್ಪ, ಕೆ ವೆಂಕಟೇಶ್, ಶಾಸಕ ರವಿಶಂಕರ್, ಪುಷ್ಪ ಅಮರನಾಥ್ ಸಾಥ್ ನೀಡಿದರು. ಇನ್ನು ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಚಾಮರಾಜನಗರದ ಹೆಗ್ಗವಾಡಿ ಗ್ರಾಮದತ್ತ ಸಿಎಂ ತೆರಳಿದರು.