ಚಿಕ್ಕಬಳ್ಳಾಪುರ : ಡಾ.ಕೆ.ಸುಧಾಕರ್ ಒಬ್ಬ ಅಯೋಗ್ಯ. ಕಾಂಗ್ರೆಸ್ ಟಿಕೆಟ್ ಗಾಗಿ ಅವರಿವರ ಕಾಲಿಗೆ ಬೀಳುತ್ತಿದ್ದಾನೆ ಎಂದು ಮಾಜಿ ಸಚಿವ ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಎಂಪಿ ಟಿಕೆಟ್ ಮಿಸ್ ಆದ್ರೆ, ಕಾಂಗ್ರೆಸ್ನಿಂದ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗೆ ಸುಧಾಕರ್ ಯತ್ನ ಮಾಡ್ತಿದ್ದಾರೆ. ಬೆಂಗಳೂರು ಉತ್ತರದ ಕಾಂಗ್ರೆಸ್ ಟಿಕೆಟ್ಗಾಗಿ ಅವರಿವರ ಕಾಲಿಗೆ ಬೀಳ್ತಿದ್ದಾನೆ ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ವೆಸ್ಟೆಂಡ್ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರ ಕಾಲಿಗೆ ಬಿದ್ದಿದ್ದಾರೆ. ಸುಧಾಕರ್ ಡಬಲ್ ಗೇಮ್ ರಾಜಕಾರಣಿ. ತಾಕತ್ತು ಇದ್ರೆ ದಮ್ಮು ಇದ್ರೆ ಚಿಕ್ಕಬಳ್ಳಾಪುರದಲ್ಲಿ ಇನ್ನೂ ಮುಂದೆ ಒಂದು ಓಟು ಹೆಚ್ಚಿಗೆ ತೆಗೆದುಕೊಳ್ಳಿ ನೋಡೋಣ. ದಲಿತರನ್ನು ಕಂಡ್ರೆ ದೂರ ಓಡುತ್ತಿದ್ರು, ಈಗ ದಲಿತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.