ಮೈಸೂರು : ನಾನು ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಈ ಬಗ್ಗೆ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತನಾಡಿದ್ದೇನೆ ಎಂದು ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ. ನಗರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಮೈಸೂರು-ಕೊಡಗು ‘ಕೈ’ ಟಿಕೆಟ್ಗೆ ಬೇಡಿಕೆ ಇಟ್ಟಿದ್ದೇನೆ. ನಾನು ಟೆಕ್ನಿಕಲಿ ಬಿಜೆಪಿಯಲ್ಲಿದ್ದೇನೆ. ನನಗೆ ಟಿಕೆಟ್ ನೀಡಿದರೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡುವೆ. ಸಿದ್ದರಾಮಯ್ಯ ನೀವು ಬಿಜೆಪಿಯಲ್ಲಿ ಇದ್ದೀರಾ ಹೇಗೆ ಅಂತಾ ಕೇಳಿದರು. ಅದಕ್ಕೆ ನಾನು ಎಲ್ಲವನ್ನೂ ವಿವರಿಸಿದ್ದೇನೆ. ಮುದ್ದು ಹನುಮೇಗೌಡರಿಗೂ ಟಿಕೆಟ್ ನೀಡಲಾಗುತ್ತಿದೆ. ಅದೇ ರೀತಿ ನನಗೂ ನೀಡಬಹುದು ಅಂತಾ ತಿಳಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ನೋಡೋಣ ಅಂತಾ ಹೇಳಿದ್ದಾರೆ. ಒಂದು ವೇಳೆ ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾಸ ಇದೆ ಎಂದಿದ್ದಾರೆ.
ಅಲ್ಲದೆ ನಾನು ಇದೇ ಕ್ಷೇತ್ರದಲ್ಲಿ ಸಂಸದನಾಗಿದ್ದೇ. ಈ ವೇಳೆ ಕೊಡಗು ಮೈಸೂರಿನಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಿಂದೆ ಸಚಿವನಾಗಿದ್ದಾಗ ಬಿಸಿಯೂಟ ಯಶಸ್ವಿನಿ ಯೋಜನೆ ಜಾರಿ ಮಾಡಿದ್ದೇನೆ. ಚುನಾವಣೆಗೆ ಹಣ ಜಾತಿಯಿಂದ ಮಾತ್ರವಲ್ಲ ಅನುಭವದ ಅವಶ್ಯಕತೆ ಇದೆ ಎಂದರು.