ಬೆಂಗಳೂರು : ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಅವರಿಗೆ ಬಿಜೆಪಿ ಲೋಕ ಸಭಾ ಚುನಾವಣೆ ಟಿಕೆಟ್ ನೀಡಿದೆ. ಈ ಸಂಬಂಧ ಮಾತನಾಡಿದ ಸಂಸದ ಡಿಕೆ ಸುರೇಶ್ , ಬೆಂಗಳೂರು ಗ್ರಾ. ಬಿಜೆಪಿ ಅಭ್ಯರ್ಥಿ ನನಗೇನು ಅಚ್ಚರಿಯಲ್ಲ. ಡಾ.ಮಂಜುನಾಥ್ H.D.ದೇವೇಗೌಡರ ಕುಟುಂಬದ ಮತ್ತೊಂದು ಭಾಗ. JDS ಪಕ್ಷ ಸರಿಯಿಲ್ಲ ಎಂದು ಅಳಿಯ ಬಿಜೆಪಿ ಸೇರಿದ್ದಾರೆ ಎಂದರು.
ಮಂಜುನಾಥ ಅವರ ರಾಜಕೀಯ ಪ್ರವೇಶದ ಬಗ್ಗೆ ನೀವು ಅವರನ್ನೇ ಕೇಳಬೇಕು. ಅವರ ರಾಜಕೀಯ ಪ್ರವೇಶದ ಬಗ್ಗೆ ನಾನು ಉತ್ತರ ಹೇಳೋದು ಸಮಂಜಸ ಅಲ್ಲ. ಅವರ ರಾಜಕೀಯ ಪ್ರವೇಶವನ್ನು ಸ್ವಾಗತ ಮಾಡುತ್ತೇವೆ. ರಾಜಕಾರಣಿಯನ್ನು ರಾಜಕಾರಣದ ದೃಷ್ಟಿಯಿಂದ ನೋಡಬೇಕು. ಇದು ದೇವೇಗೌಡರ ಕುಟುಂಬದ ಮತ್ತೊಂದು ಭಾಗ. ದೇವೇಗೌಡರ ಕುಟುಂಬದ ಮತ್ತೊಂದು ಭಾಗ ಆಗಿರೋದ್ರಿಂದ ಅಚ್ಚರಿ ಅಭ್ಯರ್ಥಿ ಅಂತ ಅನ್ನಲ್ಲ. ದೇವೇಗೌಡರ ಕುಟುಂಬದ ಭಾಗ ಬಿಜೆಪಿಯಲ್ಲಿ ಯಾಕೆ ಸ್ಪರ್ಧೆ ಎಂಬ ಪ್ರಶ್ನೆ ಎದ್ದಿದೆ. ದೇವೇಗೌಡರ ಪಾರ್ಟಿ, ಕುಮಾರಸ್ವಾಮಿ ಪಾರ್ಟಿ ಸರಿ ಇಲ್ಲ ಅಂತ ಬುದ್ಧಿವಂತ ಅಳಿಯ ತೀರ್ಮಾನ ಮಾಡಿದ್ದಾರೆ. ಅವರಿಗೆಲ್ಲಾ ದೇವರು ಒಳ್ಳೆಯದು ಮಾಡಲಿ ಎಂದು ಡಿಕೆ ಸುರೇಶ್ ತಿಳಿಸಿದರು.