ಚಿಕ್ಕಮಗಳೂರು : ಸಿದ್ದರಾಮಯ್ಯ ಬಗ್ಗೆ ಹುಷಾರು ಅಂತಾ ರಾಮಕೃಷ್ಣ ಹೆಗಡೆ ಅವತ್ತೆ ಹೇಳಿದ್ದರು. ಅವರ ಮಾತು ಕೇಳದೆ ಸಿದ್ದರಾಮಯ್ಯಗೆ ಅವಕಾಶ ನೀಡಿದೆ. ನನ್ನ 92ನೇ ವಯಸ್ಸಿನಲ್ಲೂ ನಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿದ್ದಾರೆ. ಜಿಲ್ಲೆಯ ಕಡೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇನ್ನೂ ಬದುಕಿದ್ದಾನೆ, ಅವರನ್ನೇ ಕೇಳಿ ಎಂದು ಹೇಳಿದ್ದಾರೆ. ತನ್ನದೇ ಸಮಾಜದವರನ್ನು ಸಿದ್ದರಾಮಯ್ಯ ಬೆಳೆಯಲು ಬಿಡಲಿಲ್ಲ. ದೇವೇಗೌಡರ ಆಪ್ತರೆಂಬ ಕಾರಣಕ್ಕೆ ಹಲವರನ್ನು ಮಂತ್ರಿ ಮಾಡಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಮೋದಿ ಅವರನ್ನು ಬಿಟ್ಟು ಯಾವುದೇ ಒಬ್ಬ ವ್ಯಕ್ತಿ ಅವರ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಈ ದೇಶದ ಅತ್ಯಂತ ಎತ್ತರಕ್ಕೆ ಬೆಳೆದಂತಹ ರಾಜಕಾರಣಿ ಮೋದಿ. ಕೆಲವು ಪತ್ರಿಕೆಗಳಲ್ಲಿ 18 ಇನ್ನೂ ಕೆಲವು ಪತ್ರಿಕೆಗಳಲ್ಲಿ 24 ಫೀಟ್ ಗೆಲ್ಲುತ್ತೆವೆ ಎಂದಿದ್ದಾರೆ. ಸುಮ್ಮನೆ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ. ಜನ ಮೆಚ್ಚಬೇಕಲ್ಲ ಎಂದಿದ್ದಾರೆ.