ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗೋಬಿ ಮಂಚೂರಿಗೆ ಹಾಕುವ ಕೆಮಿಕಲ್ ರಾಸಾಯನಿಕವನ್ನ ಬ್ಯಾನ್ ಮಾಡಲಾಗಿದೆ. ಸದ್ಯ ಈ ಕೆಮಿಕಲ್ ಬಳಕೆ ಮಾಡಿದ್ರೆ 10 ಸಾವಿರ ದಂಡ ವಿಧಿಸುವುದಾಗಿ ಆರೋಗ್ಯ ಇಲಾಖೆ ಸೂಚನೆ ಸಹ ನೀಡಿದೆ. ಹೀಗಾಗಿ ಕಳೆದ ಒಂದು ವಾರದಿಂದ ಗೋಬಿ ವ್ಯಾಪಾರಸ್ಥರಿಗೆ ಇದು ಭಾರಿ ಹೊಡೆತಕೊಟ್ಟಿದ್ದು, ಗೋಬಿ ಮಂಚೂರಿಯನ್ನ ತಿನ್ನುವವರ ಸಂಖ್ಯೆ ಕುಸಿದಿದೆ.
ಗೋಬಿ ಮಂಚೂರಿಗೆ ಹಾಕುವ ರಾಸಾಯನಿಕ ಕೆಮಿಕಲ್ ನಿಂದ ಕಾನ್ಸರ್ ಹರಡುತ್ತಿದೆ ಎನ್ನುವುದು ಸ್ಪಷ್ಟವಾಗಿರುವ ಹಿನ್ನೆಲೆ ಆಹಾರ ಇಲಾಖೆ ಗೋಬಿ ಮಂಚೂರಿಗೆ ಹಾಕುವ ಕೆಮಿಕಲ್ ಬ್ಯಾನ್ ಮಾಡಿದೆ. ಸಧ್ಯ ಕೆಮಿಕಲ್ ಬ್ಯಾನ್ ಮಾಡಿ ಒಂದು ವಾರ ಕಳೆದಿದ್ದು, ಒಂದು ವಾರದಿಂದ ಗೋಬಿ ವ್ಯಾಪಾರಸ್ಥರ ವ್ಯಾಪಾರ ವಹಿವಾಟು 80% ರಷ್ಟು ಕುಸಿತವಾಗಿದೆ. ಗೋಬಿ ತಿನ್ನಲು ಗ್ರಾಹಕರು ಸಹ ಆಸಕ್ತಿ ಕಳೆದು ಕೊಂಡಿದ್ದಾರೆ. ಹೀಗಾಗಿ ಮೆಜೆಸ್ಟಿಕ್, ಮಲ್ಲೇಶ್ವರಂ, ಜೆಪಿ ನಗರ, ರಾಜಾಜಿನಗರ, ವಿಜಯನಗರದ , ವಿಲ್ಸನ್ ಗಾರ್ಡಾನ್ ಸೇರಿದಂತೆ ವಿವಿಧೆಡೆ ಗೋಬಿ ಮಂಚೂರಿ ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಪಾನಿಪೂರಿ, ಬೇಲ್ಪೂರಿ, ಸೇವ್ ಪೂರಿಗಳತ್ತ ಹೆಚ್ಚು ಜನರು ಮುಖ ಮಾಡ್ತಿದ್ದಾರೆ.