ಮೈಸೂರು : ಚಾರ್ಜ್ ಹಾಕಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಎಲೆಕ್ಟ್ರಿಕ್ ಬೈಕ್ ಜೊತೆಗೆ ಬೈಕ್ ಮತ್ತು ಕಾರು ಹೊತ್ತಿ ಉರಿದ ಘಟನೆ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಡೆದಿದೆ. ಚಾರ್ಜ್ ಹಾಕಿದ್ದ ವೇಳೆ ಮೊದಲು ಎಲೆಕ್ಟ್ರಿಕ್ ಬೈಕ್ ಬೆಂಕಿ ಹೊತ್ತಿಕೊಂಡಿದೆ. ನಂತರ ಪಕ್ಕದಲ್ಲೇ ನಿಂತಿದ್ದ ಮತ್ತೊಂದು ಬೈಕ್ ಮತ್ತು ಕಾರಿಗೂ ಬೆಂಕಿ ತಗುಲಿ ಸುಟ್ಟು ಭಸ್ಮಗೊಂಡಿವೆ . ಬೆಂಕಿಯಿಂದ ಮನೆಗೂ ಹಾನಿಯಾಗಿದ್ದು, ಘಟನೆಯಿಂದ ಏರಿಯಾ ಜನರು ದಿಗ್ಬ್ರಾಂತರಾಗಿದ್ದಾರೆ. ಇನ್ನು ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.