ಮಂಡ್ಯ, ಮಾರ್ಚ್ 27: ಮಂಡ್ಯ ಜನರು ಘಟಾನುಘಟಿ ನಾಯಕರನ್ನೇ ಸೋಲಿಸಿದ್ದಾರೆ. ಇನ್ನು ಹೆಚ್ಡಿ ಕುಮಾರಸ್ವಾಮಿ ಯಾವ ಲೆಕ್ಕ ಎಂದು ಶಾಸಕ ಕದಲೂರು ಉದಯ್ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಅವರು, ಜಿ.ಮಾದೇಗೌಡ, ನಟ ಅಂಬರೀಶ್ರಂಥವರೇ ಸೋತಿದ್ದಾರೆ. ಯಾವುದೋ ಊರಿಂದ ಬಂದ ಕುಮಾರಸ್ವಾಮಿ ಯಾವ ಲೆಕ್ಕ. ಮಂಡ್ಯ ಜಿಲ್ಲೆಗೂ H.D.ಕುಮಾರಸ್ವಾಮಿಗೂ ಏನು ಸಂಬಂಧ? ಈ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ನಮ್ಮ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ಸ್ಟಾರ್ ಚಂದ್ರು ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
ಹಿಂದಿನಿಂದಲೂ ಮಂಡ್ಯ ಜನಕ್ಕೆ ಅನ್ಯಾಯ ಆಗಿದೆ. ಜೆಡಿಎಸ್ಗೆ ಬೆಂಬಲ ಕೊಟ್ಟಿದ್ದರು, ಕಾಂಗ್ರೆಸ್ ಪಕ್ಷವನ್ನ ಸಂಪೂರ್ಣವಾಗಿ ಸೋಲಿಸಿದರು. ಅವರೆಲ್ಲ ಗೆದ್ದರು, ಮುಖ್ಯಮಂತ್ರಿಯಾದರಾ, ಮೂರ್ನಾಲ್ಕು ಜನ ಮಂತ್ರಿಗಳು ಕೂಡ ಆದರು. ಯಾವ ಶಾಸಕರಾದರೂ ಏನಾದರೂ ಕೆಲಸ ಮಾಡಿದ್ದಾರಾ? ಕುಮಾರಸ್ವಾಮಿ ಯಾರು ಎಂದು ಪ್ರಶ್ನಿಸಿದ್ದಾರೆ.
ನಾನು ಕೂಡ ಸೇವಾ ಮನೋಭಾವದಿಂದ ರಾಜಕೀಯಕ್ಕೆ ಬಂದಿದ್ದೇನೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜಿಲ್ಲೆಯ ಜನತೆ ಕೈ ಹಿಡಿಯುತ್ತಾರೆ ಎಂದು ಹೆಚ್ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ಮಾಡಿದ್ದಾರೆ.