ಪ್ರತಿನಿಧಿ ವರದಿ ಹುಣಸೂರು
೨೦೨೩-೨೪ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯ ಕೃಷ್ಣರಾಜ ವಲಯ ಮಟ್ಟದ ಅಂತರ ಕಾಲೇಜು ಪುರುಷರ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಹುಣಸೂರು ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನದೊಂದಿಗೆ ಅಂತರವಲಯಮಟ್ಟಕ್ಕೆ ಆಯ್ಕೆಯಾಗಿದೆ.
ಪಿರಿಯಾಪಟ್ಟಣದಲ್ಲಿ ಇತ್ತೀಚೆಗೆ ನಡೆದ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಜ್ಙಾನಧಾರ ಕಾಲೇಜು ತಂಡ ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ೨-೧ ಅಂತರದಿಂದ ಸೋಲಿಸಿತು. ಕ್ರೀಡಾಪಟುಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.
೨೭ಊUಓ೧: ಹುಣಸೂರು ನಗರದ ಜ್ಞಾನಧಾರ ಕಾಲೇಜಿನ ಥ್ರೋಬಾಲ್ ತಂಡ ಕೃಷ್ಣರಾಜ ವಲಯ ಮಟ್ಟದ ಅಂತರಕಾಲೇಜು ಪಂದ್ಯಾವಳಿಯಲ್ಲಿ ಪ್ರಥಮಸ್ಥಾನದೊಂದಿಗೆ ಅಂತರವಲಯ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ನಾಯಕ ಆರ್.ಪ್ರೀತಮ್ ಮತ್ತು ತಂಡದ ಸದಸ್ಯರಿದ್ದಾರೆ.