ತೆಲುಗು ಚಿತ್ರರಂಗದ ಭರವಸೆಯ ನಟ ಎನಿಸಿಕೊಂಡಿರುವ ನವೀನ್ ಪೋಲಿಶೆಟ್ಟಿ ಅಮೆರಿಕದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ನವೀನ್ ಪೋಲಿಶೆಟ್ಟಿ ಅಲ್ಲಿ ಬೈಕ್ ಚಲಾಯಿಸುವ ಸಮಯದಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ನವೀನ್ಗೆ ಹಲವು ಗಾಯಗಳಾಗಿವೆ ಎನ್ನಲಾಗುತ್ತಿದ್ದು, ಕೈ ಮೂಳೆ ಸಹ ಮುರಿದಿದೆ. ಅಮೆರಿಕದ ಆಸ್ಪತ್ರೆಯೊಂದರಲ್ಲಿ ನವೀನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕದ ಡಲ್ಲಾಸ್ನಲ್ಲಿ ನವೀನ್ ಪೋಲಿಶೆಟ್ಟಿ ಅಪಘಾತಕ್ಕೆ ಈಡಾಗಿದ್ದಾರೆ. ಅಪಘಾತ ತೀವ್ರವಾಗಿತ್ತು ಎನ್ನಲಾಗುತ್ತಿದೆ. ನವೀನ್ಗೆ ಕೈ ಮೂಳೆ ಮಾತ್ರವೇ ಅಲ್ಲದೆ ಇನ್ನೂ ಹಲವು ಕಡೆ ಗಂಭೀರ ಪೆಟ್ಟುಗಳಾಗಿವೆ ಆದರೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಎನ್ನಲಾಗುತ್ತಿದೆ.