ಬೆಂಗಳೂರು, ಮಾರ್ಚ್ 30: ಅನಿರೀಕ್ಷಿತವಾಗಿ ಕೊಟ್ಟ ಅವಕಾಶವನ್ನು ಬೇಡ ಅನ್ನೋಕೆ ಆಗಲಿಲ್ಲ. ಇದು ಒಳ್ಳೆಯ ಅವಕಾಶ ಗೆದ್ದು ತೋರಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೋಲಾರ ಕ್ಷೇತ್ರದ ಟಿಕೆಟ್ ಬೇಕು ಎಂದು ಕೇಳಿರಲಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನನ್ನನ್ನು ಕರೆದು ಕೇಳಿದಾಗ ನಾನು ಬೇಡ ಅನ್ನಲಿಲ್ಲ. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವೆ ಎಂದು ಹೇಳಿದ್ದಾರೆ.
ಕೋಲಾರ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ವೈಮನಸ್ಸು ಇರುವುದು ನಿಜ. ಅದನ್ನು ಮುಚ್ಚಿಡುವ ವಿಷಯ ಅಲ್ಲ, ಎಲ್ಲರಿಗೂ ಗೊತ್ತಿರುವ ವಿಚಾರ. ನನ್ನನ್ನು ಯಾರೂ ವಿರೋಧ ಮಾಡುವುದಿಲ್ಲವೆನ್ನುವ ಭಾವನೆಯಿದೆ. ಕೋಲಾರ ಜಿಲ್ಲೆಯ ಎಲ್ಲಾ ಮುಖಂಡರ ಜೊತೆ ನಾನು ಚೆನ್ನಾಗಿದ್ದೇನೆ ಎಂದರು.
ರಮೇಶ್ ಕುಮಾರ್ ನನ್ನ ತಂದೆ ಜೊತೆ ಒಡನಾಟ ಇಟ್ಟುಕೊಂಡಿದ್ದರು. ನನ್ನ ತಂದೆ ಬಗ್ಗೆ ರಮೇಶ್ ಕುಮಾರ್ಗೆ ಅಪಾರವಾದ ಗೌರವವಿದೆ. ಸಚಿವ ಮುನಿಯಪ್ಪ ಜೊತೆ 25 ವರ್ಷಗಳಿಂದಲೂ ಒಡನಾಟವಿದೆ. ರಾಜ್ಯದಲ್ಲಿ ಮುನಿಯಪ್ಪನವರೇ ಎಡಗೈ ಸಮುದಾಯದ ನಾಯಕ. ಕೆ.ಹೆಚ್.ಮುನಿಯಪ್ಪ ಜೊತೆ ನಿರಂತರವಾಗಿ ಸಂಕರ್ಪದಲ್ಲಿ ಇದ್ದರು ಎಂದು ಹೇಳಿದ್ದಾರೆ.