ಬೆಂಗಳೂರು: ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ಜಿಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರ ಹಾರ್ಟ್ ಆಪರೇಶನ್ ಬಗ್ಗೆ ಹಗುರವಾಗಿ ಮಾತಾಡಿದ್ದು ಖುದ್ದು ಅವರ ಪಕ್ಷದ ನಾಯಕರನ್ನೇ ಕೆರಳಿಸಿದೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಯಾವುದೇ ಪಕ್ಷದವರಾಗಲಿ, ರಾಜಕಾರಣದಲ್ಲಿ ಯಾವತ್ತೂ ವೈಯಕ್ತಿಕ ಟೀಕೆಗಳನ್ನು ಮಾಡಬಾರದು ಎಂದು ಹೇಳಿದರು. ಮಾತಾಡುವಾಗ ನಮ್ಮ ನಾಲಗೆ ಮೇಲೆ ಹಿಡಿತವಿರಬೇಕು, ಬೇರೆಯವರು ಬೇರೆ ಬೇರೆ ವಿಚಾರಗಳ ಬಗ್ಗೆ ಮಾತಾಡುತ್ತಾರೆ, ಅದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಏನೇನೋ ಮಾತಾಡುವುದು ಸರಿಯಲ್ಲ, ಅದು ಬೇರೆ ಪಕ್ಷದ ನಾಯಕನ ಅರೋಗ್ಯದ ವಿಷಯವಾಗಿರಬಹುದು, ಅಥವಾ ಮತ್ತೇನೋ ಖಾಸಗಿ ವಿಷಯ ಆಗಿರಬಹುದು, ಅದನ್ನು ಸಾರ್ವಜನಿಕವಾಗಿ ಚರ್ಚಿಸುವ ಪ್ರಯತ್ನಕ್ಕೆ ಯಾವತ್ತೂ ಕೈಹಾಕಬಾರದೆಂದು ಪರಮೇಶ್ವರ್ ಹೇಳಿದರು.