ಪ್ರತಿನಿಧಿ ವರದಿ ಗುಂಡ್ಲುಪೇಟೆ
ಪಟ್ಟಣದಿಂದ ಕೋಡಹಳ್ಳಿಗೆ ತೆರಳುವ ರಸ್ತೆಯಲ್ಲಿ ದ್ವಿ ಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 48 ಸಾವಿರ ರೂ.ಮೌಲ್ಯದ 4500 ಲೀಟರ್ ಮದ್ಯವನ್ನು ಅಬಕಾರಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಪಟ್ಟಣದಿಂದ ಕೋಡಹಳ್ಳಿಗೆ ತೆರಳುವ ರಸ್ತೆಯಲ್ಲಿ ಅಬಕಾರಿ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಅರಿತು ದಾಳಿ ನಡೆಸುತ್ತಿದ್ದಂತೆ ಆರೋಪಿ ದ್ವಿಚಕ್ರ ವಾಹನದೊಂದಿಗೆ ಮದ್ಯವನ್ನು ಬಿಟ್ಟು ಪರಾರಿಯಾಗಿದ್ದಾನೆ.
ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ದ್ವಿಚಕ್ರ ವಾಹನ ಹಾಗೂ 48 ಸಾವಿರ ರೂ.ಮೌಲ್ಯದ 4.500 ಲೀಟರ್ ಮದ್ಯವನ್ನು ವಶಕ್ಕೆ ಪಡೆದು,ಪ್ರಕರಣ ದಾಖಲಿಸಿದ್ದಾರೆ. ದಾಳಿಯಲ್ಲಿ ದಾಖಲಿಸಿರುತ್ತಾರೆ ವಲಯ ಸಿಬ್ಬಂದಿ , ಅಬಕಾರಿ ಪೇದೆಗಳಾದ ಭಾಸ್ಕರ್, ಕುಮಾರ ಸ್ವಾಮಿ, ಸಿದ್ದೇಶ್, ಗೋವಿಂದರಾಜು, ಷಣ್ಮುಖ ಮತ್ತು ವಾಹನ ಚಾಲಕ ಸೋಮಣ್ಣ ಇದ್ದರು.
29ಸಿಎಚ್ಎನ್.5:
ಚಿತ್ರವಿದೆ