ಗುಂಡ್ಲುಪೇಟೆ : ದಾಖಲೆಯಿಲ್ಲದೆ ತಾಲೂಕಿನ ಗಡಿ ಭಾಗದ ಮೂಲಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4,98,000 ರೂ. ಅನ್ನು ವಶಪಡಿಸಿಕೊಳ್ಳಲಾಗಿದೆ.
ಪಟ್ಟಣದ ವೃತ್ತ ನಿರೀಕ್ಷಕರಾದ ಪರ ಶಿವಮೂರ್ತಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿತ್ತು. ತಾಲೂಕಿನ ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಮದ್ದೂರು ಮತ್ತು ಕೆಕ್ಕನಳ್ಳ ಚೆಕ್ ಪೋಸ್ಟ್ ಅಲ್ಲಿ ಶುಕ್ರವಾರ ಬೆಳಗ್ಗೆ 6.30 ರ ಸಮಯದಲ್ಲಿಈ ಹಣ ಸೀಜ್ ಮಾಡಲಾಗಿದೆ. ಪಿ.ಎಸ್.ಐ. ಸಾಹೇಬ್ ಗೌಡ , ಸಿಬ್ಬಂದಿ ಪೇದೆ ಪ್ರಭುಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.