ಬೆಂಗಳೂರು : ಎನ್ಐಎ ನೂತನ ಡಿಜಿಯಾಗಿ ಸದಾನಂದ್ ವಸಂತ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಸೇವೆಯಿಂದ ನಿವೃತ್ತರಾದ ದಿನಕರ್ ಗುಪ್ತಾರಿಂದ ಅಧಿಕಾರ ಹಸ್ತಾಂತರ ಮಾಡಲಾಗಿದೆ. ಮಹಾರಾಷ್ಟ್ರ ಕೇಡರ್ನ 1990ರ ಬ್ಯಾಚ್ನ IPS ಅಧಿಕಾರಿ ಸದಾನಂದ್ ವಸಂತ್ ಅವರು ದಿನಕರ್ ಗುಪ್ತಾ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ. 2008ರಲ್ಲಿ ಮುಂಬೈ ಹೋಟೆಲ್ ಮೇಲಿನ ಭಯೋತ್ಪಾದಕರ ದಾಳಿ ವೇಳೆ ಸದಾನಂದ ಅವರು ಮಹಾರಾಷ್ಟ್ರ ATS ಮುಖ್ಯಸ್ಥರಾಗಿದ್ದರು. ಉಗ್ರರನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2008ರಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಭಾಜನರಾಗಿದ್ದರು.
ಮಹಾರಾಷ್ಟ್ರ ಕೇಡರ್ನ 1990-ಬ್ಯಾಚ್ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿರುವ ಸದಾನಂದ ಅವರು ಡಿಸೆಂಬರ್ 31, 2026 ರಂದು ಅವರ ನಿವೃತ್ತಿಯ ಅವಧಿಯವರೆಗೆ ಎನ್ಐಎಯ ಡೈರೆಕ್ಟರ್ ಜನರಲ್ (ಡಿಜಿ) ಆಗಿ ಸೇವೆ ಸಲ್ಲಿಸಲಿದ್ದಾರೆ. ರಾಜಸ್ಥಾನ ಕೇಡರ್ನ 1990-ಬ್ಯಾಚ್ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಶರ್ಮಾ ಅವರನ್ನು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋದ ಮಹಾನಿರ್ದೇಶಕರನ್ನಾಗಿ ನೇಮಿಸಿತು. ಅವರು ಜೂನ್ 30, 2026 ರಂದು ತಮ್ಮ ನಿವೃತ್ತಿಯಾಗುವವರೆಗೆ ಅಧಿಕಾರಾವಧಿಯನ್ನು ಹೊಂದಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಬಾಲಾಜಿ ಶ್ರೀವಾಸ್ತವ ಅವರ ನಂತರ ಶರ್ಮಾ ಅವರು ಅಧಿಕಾರ ವಹಿಸಿಕೊಳ್ಳುತ್ತಾರೆ. ಪಿಯೂಷ್ ಆನಂದ್ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ನೂತನ ಮುಖ್ಯಸ್ಥರಾಗಲಿದ್ದಾರೆ.