ಪ್ರತಿನಿಧಿ ವರದಿ ಅಮ್ಮತ್ತಿ
ಫ್ರೌಢ ಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ನೋಂದಾಯಿತ ಫುಟ್ಬಾಲ್ ಕ್ಲಬ್ಗಳ ನಡುವಿನ ಫುಟ್ಬಾಲ್ ಲೀಗ್ ಟೂರ್ನಿಯಲ್ಲಿ ಬೋಯಿಕೇರಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಅಮ್ಮತ್ತಿ ಮಿಲನ್ಸ್ ಎಫ್ಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಬೋಯಿಕೇರಿ ಬಿಎಫ್ ಸಿ ತಂಡವು 4-0 ಗೋಲುಗಳ ಅಂತರದಿಂದ ಜಯಿಸಿತು. ಸ್ಟ್ರೈಕರ್ ವಿಜು 7 ನಿಮಿಷ ಮತ್ತು 58 ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದರು. 40 ನೇ ನಿಮಿಷದಲ್ಲಿ ಪಾಂಡಿಯನ್, 55 ನೇ ನಿಮಿಷದಲ್ಲಿ ಅಣ್ಣಪ್ಪ ಗೋಲು ಬಾರಿಸಿ ಗೆಲುವಿನ ಅಂತರ ಹೆಚ್ಚಿಸಿದರು.
ಸೆಮಿ ; ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೋಯಿಕೇರಿ ಬಿಎಫ್ಸಿ ತಂಡವು ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ದಿವಾಕರ್, ತನ್ವೀರ್ ತಲಾ ಒಂದೊಂದು ಗೋಲು ಹೊಡೆದರು. ಎರಡನೇ ಸೆಮಿಫೈನಲ್ನಲ್ಲಿ ಅಮ್ಮತ್ತಿ ಮಿಲನ್ಸ್ ಎಫ್.ಸಿ ತಂಡವು ಒಂಟಿಯಂಗಡಿ ಸಹರಾ ಯೂತ್ ಅಸೋಸಿಯೇಷನ್ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಅಮ್ಮತ್ತಿ ಪರ ಮಂಜು, ರಾಜೇಶ್, ಸಹರಾ ತಂಡದ ಸುನಿಲ್ ತಲಾ ಒಂದೊಂದು ಗೋಲು ಬಾರಿಸಿದರು.
ಚಾಂಪಿಯನ್ ತಂಡಕ್ಕೆ 25 ಸಾವಿರ ನಗದು, ರನ್ನರ್ ಅಪ್ ಸ್ಥಾನದ ತಂಡಕ್ಕೆ 15 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ತೀರ್ಪುಗಾರರಾಗಿ ಧೀರಜ್ ರೈ, ಸಹ ತೀರ್ಪುಗಾರರಾಗಿ ಇಬ್ರಾಹಿಂ, ಪವನ್ ದರ್ಶನ್ ಸುಕುಮಾರ್ ಕಾರ್ಯನಿರ್ವಹಿಸಿದರು.
ಮೈಸೂರು ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಆಂಬುಲೆನ್ಸ್ ಉಚಿತ ಸೇವೆ ನೀಡಲಾಯಿತು.
ಸಮಾರೋಪ : ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಷನ್ ಸದಸ್ಯ ಮಹೇಂದ್ರ ಸುಂಟಿಕೊಪ್ಪ ಕೊಡಗು ಜಿಲ್ಲಾ ಫುಟ್ಬಾಲ್ ತಂಡದ 22 ಆಟಗಾರರಿಗೆ ಕೊಡುಗೆಯಾಗಿ ನೀಡಿರುವ ಜರ್ಸಿಯನ್ನು ಬಿಡುಗಡೆಗೊಳಿಸಲಾಯಿತು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಕ್ರಿಸ್ಟೋಫರ್, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಖಜಾಂಚಿ ದೀಪು ಮಾಚಯ್ಯ, ಸದಸ್ಯ ಲಿಜೇಶ್ ಅಮ್ಮತ್ತಿ, ಜಿಲ್ಲಾ ಕಾರ್ಯದರ್ಶಿ ಪಂದಿಕಂಡ ನಾಗೇಶ್, ತೀರ್ಪುಗಾರ ಅರುಣ್, ಇಸ್ಮಾಯಿಲ್ ಕಂಡಕರೆ ಇದ್ದರು.
ಫೋಟೋ 1 ಜಿಕೆಪಿ 01 ; ಫುಟ್ಬಾಲ್ ಲೀಗ್ ಟೂರ್ನಿ ಚಾಂಪಿಯನ್ ಬೋಯಿಕೇರಿ ತಂಡ
02 ; ರನ್ನರ್ ಅಪ್ ಅಮ್ಮತ್ತಿ ಮಿಲನ್ಸ್