ಪ್ರತಿನಿಧಿ ವರದಿ ಮಡಿಕೇರಿ
ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ನೇಮಕಾತಿ ಆದೇಶ ಜಾರಿ ಮಾಡಲಾಗಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಮತಗಟ್ಟೆ ಅಧಿಕಾರಿಗಳು ನಮೂನೆ 12ಎ ರಲ್ಲಿ ಹಾಗೂ ಈ ಕ್ಷೇತ್ರದ ಹೊರಗೆ ಇತರೆ ಲೋಕಸಭಾ ಕ್ಷೇತ್ರದ ಅಧಿಕಾರಿಗಳು ನಮೂನೆ 12 ರಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ನೇಮಕಾತಿ ಆದೇಶದ ಪ್ರತಿಯೊಂದಿಗೆ ಏ.4 ರೊಳಗೆ, ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿನ ಅಧಿಕಾರಿಗಳು ತಾಲೂಕು ಕಚೇರಿ, ಕುಶಾಲನಗರ ತಾಲೂಕು ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು, ಕುಶಾಲನಗರ ತಾಲೂಕು ಕಚೇರಿ ಹಾಗೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು ಸೋಮವಾರಪೇಟೆ ತಾಲೂಕು ಕಚೇರಿಗೆ ಅಂಚೆ ಮತದಾನಕ್ಕಾಗಿ ನಮೂನೆ 12 ಮತ್ತು ಇಡಿಸಿಗಾಗಿ 12ಎ ಅನ್ನು ನೀಡುವಂತೆ ತಹಸೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.