ಪ್ರತಿನಿಧಿ ವರದಿ ಗೋಣಿಕೊಪ್ಪ
ಮಹಿಳೆಯು ತನ್ನ ಪ್ರತಿಭೆಯನ್ನು ಹೊರ ಹಾಕಲು ಪ್ರಯತ್ನಿಸಬೇಕಿದೆ. ಈ ಬಾರಿ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಂಡು ಅಂತರ್ಜಲ ವೃದ್ಧಿಗೆ ಕೈಜೋಡಿಸಬೇಕು ಎಂದು ಬೋಂಡಿಂಗ್ ಬ್ಲೂಮ್ಸ್ ನರ್ಚರಿಂಗ್ ನೇಟರ್ ಸಂಸ್ಥೆ ಅಧ್ಯಕ್ಷರಾದ ಬಾಚಮಾಡ ಲಿಜೆಟ್ ಹೇಳಿದರು.
ಸಂಸ್ಥೆಯ ವತಿಯಿಂದ ಕುಷಿನ್ ಪಪೇರಾ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ. ಗ್ರೀಷ್ಮಾ ಬೋಜಮ್ಮ ಮಾತನಾಡಿ, ಮಹಿಳೆಯರು ತಮಗೆ ಆಸಕ್ತಿಯುಳ್ಳ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಸೂತಿ ತಜ್ಞೆ ಡಾ. ಮುಕ್ಕಾಟೀರ ಗ್ರೀಷ್ಮಾ ಬೋಜಮ್ಮ, ಸಿನೆಮಾ ನಿರ್ದೇಶಕಿ ತಡಿಯಂಗಡ ಗಾನಾ ಸೋಮಣ್ಣ, ಉದ್ಯಮಿ ಕೊಙಂಡ ನಿಲಿನಾ ಅಪ್ಪಯ್ಯ ಸನ್ಮಾನ ಸ್ವೀಕರಿಸಿದರು. ವಿವಿಧ ತಳಿಯ ಸಸ್ಯಗಳನ್ನು ಮಲ್ಲೇಂಗಡ ಪಿಂಕಿ ಮುತ್ತಪ್ಪ ವಿತರಣೆ ಮಾಡಿದರು. ಅಪ್ಪುಮಣಿಯಂಡ ಶೈಲ ಭೀಮಯ್ಯ, ತಡಿಯಂಗಡ ಸೌಮ್ಯ ಕರುಂಬಯ್ಯ, ಆದೇಂಗಡ ತನುಜಾ ಅಚ್ಚಯ್ಯ ಇದ್ದರು