ಪ್ರತಿನಿಧಿ ವರದಿ ಮಡಿಕೇರಿ
ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಹಿರಿಯ ಕಲಾವಿದರು ಮತ್ತು ಹೊಸ ಕಲಾವಿದರ ಜತೆಗೂಡಿ ಕರ್ನಾಟಕ ಫಿಲಂ ಅಸೋಸಿಯೇಷನ್ ಎಂಬ ನೂತನ ಫಿಲಂ ಚೇಂಬರ್ಅನ್ನು ಸ್ಥಾಪನೆ ಮಾಡಿದ್ದು, ಮೂವಿ ಬ್ಯಾನರ್ ಹಾಗೂ ಮೂವಿ ಟೈಟಲ್ ನೋಂದಾವಣಿಗೆ ಅವಕಾಶ ಇದೆ ಎಂದು ಅಸೋಸಿಯೇಷನ್ನ ಸಲಹೆಗಾರ ಡಾ.ಎನ್.ಎನ್.ಪ್ರಹ್ಲಾದ್ ತಿಳಿಸಿದರು.
ನೂತನ ಅಸೋಸಿಯೇಷನ್ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಮೂವಿ ಬ್ಯಾನರ್, ಮೂವಿ ಟೈಟಲ್, ಸಿನಿಮಾಕ್ಕೆ ಸಂಬಂಧಿಸಿದ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮ್ಯಾನ್, ಡ್ಯಾನ್ಸ್, ಸಂಗೀತ, ಫೈಟ್ ಮಾಸ್ಟರ್ ಸೇರಿದಂತೆ ಎಲ್ಲ ವಿಭಾಗದ ನೊಂದಾಣಿಗೆ ಅವಕಾಶ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೊಂದಾಣಿ ನಂತರ ಗುರುತಿನ ಚೀಟಿ ನೀಡಲಾಗುವುದು. ಅಲ್ಲದೇ ಸದಸ್ಯರು ಅಸೋಸಿಯೇಷನ್ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಮತ್ತು ಮತದಾನ ಮಾಡುವ ಅವಕಾಶ ಕಲ್ಪಿಸಲಾಗುವುದೆಂದರು. ಮೇಕಪ್ ಮ್ಯಾನ್, ಸ್ಕ್ರಿಪ್ಟ್ ಬರಹಗಾರರು, ಸಂಕಲನ, ಛಾಯಾಗ್ರಹಣ, ನಿರ್ದೇಶನ, ನಟನೆ, ಚಿತ್ರೀಕರಣ, ಶೀರ್ಷಿಕೆ ಆಯ್ಕೆ, ಚಿತ್ರಗೀತೆ ರಚನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುವುದೆಂದು ತಿಳಿಸಿದರು. ಅಸೋಸಿಯೇಷನ್ನಲ್ಲಿ ಈಗಾಗಲೇ 335 ಸದಸ್ಯರಿದ್ದಾರೆ ಎಂದರು. ಗೋಷ್ಠಿಯಲ್ಲಿ ಅಸೋಸಿಯೇಷನ್ ಸದಸ್ಯರಾದ ಮುನ್ನೂರು ಕೋಟಿ ರಾಧ, ಹೇಮಲತ ಉಪಸ್ಥಿತರಿದ್ದರು.