ಪ್ರತಿನಿಧಿ ವರದಿ ಚಾಮರಾಜನಗರ
ಲೋಕಸಭಾ ಚುನಾವಣೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದಿಂದ ವೆಚ್ಚ ವೀಕ್ಷಕರು, ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ನೇಮಕವಾಗಿದ್ದಾರೆ.
ಎಚ್.ಡಿ. ಕೋಟೆ, ನಂಜನಗೂಡು, ವರುಣ, ಟಿ.ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ವೆಚ್ಚ ವೀಕ್ಷಕರಾಗಿ ಎಂ.ಮೋಹನ್ ಬಾಬು, ಐ.ಆರ್.ಎಸ್ (ಮೊ.ಸಂ 9481687450) (ಇ-ಮೇಲ್ eochnagar2024@gmail.com) ಅವರನ್ನು ನೇಮಕ ಮಾಡಲಾಗಿದೆ.
ಸಾಮಾನ್ಯ ವೀಕ್ಷಕರಾಗಿ ಪಿ.ಸಿ.ಮೀನಾ, ಭಾಆಸೇ (ಮೊ.ಸಂ 9481624005) (ಇ-ಮೇಲ್ generalobserverchnagar@gmail.com) ಹಾಗೂ ಪೊಲೀಸ್ ವೀಕ್ಷಕರಾಗಿ ಮನೋಜ್ ತಿವಾರಿ ಭಾಪೊಸೇ (ಮೊ.ಸಂ 9482316650) (ಇ-ಮೇಲ್ policeobserverchnagar@gmail.com) ಅವರನ್ನು ನೇಮಕ ಮಾಡಲಾಗಿದೆ.
ಮೇಲ್ಕಂಡ ಅಧಿಕಾರಿಗಳು ಸರ್ಕಾರಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಾರ್ವಜನಿಕರು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಕುರಿತು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಚುನಾವಣೆ ಸಂಬಂಧ ದೂರುಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.
4ಸಿಎಚ್ಎನ್.2: