ಪ್ರತಿನಿಧಿ ವರದಿ ಚಾಮರಾಜನಗರ
2024ರ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು,ಈ ಚುನಾವಣೆಯಲ್ಲಿ ಮತದಾನ ಮಾಡಲು ಜಿಲ್ಲಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 18 ರಿಂದ 19 ವರ್ಷದ ಒಟ್ಟು 16563 ಯುವಜನರು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಮಾ.25ರವರೆಗೆ ಅರ್ಜಿ ನಮೂನೆ 6 ಅನ್ನು ಭರ್ತಿ ಮಾಡಿ ಹೊಸದಾಗಿ ಮತದಾರರ ಪಟ್ಟಿಗೆ ಸೇರಲು ಅವಕಾಶ ನೀಡಲಾಗಿತ್ತು. ಅರ್ಜಿಯನ್ನು ಪರಿಶೀಲಿಸಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏ.4 ರವರೆಗೆ ನಡೆದು ಅಂತ್ಯಗೊಂಡಿದೆ.
ಹೊಸದಾಗಿ ಸೇರ್ಪಡೆಗೊಂಡ ಒಟ್ಟು 16563 ಯುವ ಮತದಾರರಲ್ಲಿ 7523 ಯುವತಿಯರು, 9040 ಯುವಕ ಮತದಾರರಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಹನೂರು ವಿಧಾನಸಭೆ ಕ್ಷೇತ್ರದಲ್ಲಿ 4440, ಚಾಮರಾಜನಗರ ಕ್ಷೇತ್ರದಲ್ಲಿ 4157, ಕೊಳ್ಳೇಗಾಲ ಕ್ಷೇತ್ರದಲ್ಲಿ 3901, ಗುಂಡ್ಲುಪೇಟೆ ಕ್ಷೇತ್ರದಲ್ಲಿ 4065 ಯುವ ಮತದಾರರು ಸೇರ್ಪಡೆಯಾಗಿದ್ದಾರೆ.
ಜಿಲ್ಲೆಯಲ್ಲಿ 12545 ವಿಕಲಚೇತನ ಮತದಾರರಿದ್ದಾರೆ. ಇವರಲ್ಲಿ 7604 ಪುರುಷ ಹಾಗೂ 4952 ಮಹಿಳಾ ಮತದಾರರಿದ್ದಾರೆ.
ಹನೂರು ಕ್ಷೇತ್ರದಲ್ಲಿ ಒಟ್ಟು 2951 ವಿಕಲಚೇತನ ಮತದಾರರಿದ್ದು, ಇವರಲ್ಲಿ 1747 ಪುರುಷ, 1204 ಮಹಿಳಾ ಮತದಾರರಾಗಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಒಟ್ಟು 3176 ಮತದಾರರಿದ್ದು, ಈ ಪೈಕಿ 1924 ಪುರುಷ, 1252 ಮಹಿಳಾ ಮತದಾರರಾಗಿದ್ದಾರೆ.
ಚಾಮರಾಜನಗರ ಕ್ಷೇತ್ರದಲ್ಲಿ ಒಟ್ಟು 2759 ವಿಕಲಚೇತನ ಮತದಾರರಿದ್ದು, ಇವರಲ್ಲಿ 1711 ಪುರುಷ, 1048 ಮಹಿಳಾ ಮತದಾರರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ 3659 ಮತದಾರರಿದ್ದು, ಈ ಪೈಕಿ 2222 ಪುರುಷ, 1437 ಮಹಿಳಾ ಮತದಾರರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 421 ಶತಾಯುಷಿ ಮತದಾರರು ಇದ್ದಾರೆ. ಹನೂರು ವಿಧಾನಸಭೆ ಕ್ಷೇತ್ರದಲ್ಲಿ 73, ಚಾಮರಾಜನಗರ ಕ್ಷೇತ್ರದಲ್ಲಿ 62,ಗುಂಡ್ಲುಪೇಟೆ ಕ್ಷೇತ್ರದಲ್ಲಿ 195, ಕೊಳ್ಳೇಗಾಲ ಕ್ಷೇತ್ರದಲ್ಲಿ 91 ಇದ್ದಾರೆ.
ತೃತೀಯ ಲಿಂಗಿ ಮತದಾರರು 60 ಮಂದಿ ಇದ್ದಾರೆ. ಹನೂರು ಕ್ಷೇತ್ರದಲ್ಲಿ 10, ಕೊಳ್ಳೇಗಾಲ ಕ್ಷೇತ್ರದಲ್ಲಿ 20, ಚಾಮರಾಜನಗರ ಕ್ಷೇತ್ರದಲ್ಲಿ 14, ಗುಂಡ್ಲುಪೇಟೆ ಕ್ಷೇತ್ರದಲ್ಲಿ 16 ಜನರಿದ್ದಾರೆ.
ಜಿಲ್ಲೆಯಲ್ಲಿ ಅಂತಿಮವಾಗಿ ಒಟ್ಟು 876444 ಮತದಾರರಿದ್ದಾರೆ. ಇವರಲ್ಲಿ 431626 ಪುರುಷ, 444756 ಮಹಿಳಾ, 62 ಇತರೆ ಮತದಾರರಾಗಿದ್ದಾರೆ. ಈ ಪೈಕಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.
7ಸಿಎಚ್ಎಚ್.4:
( ಯುವ ಮತದಾರರ ಸಾಂದರ್ಭಿಕ ಚಿತ್ರ ಬಳಸಿಕೊಳ್ಳಿ ಸರ್)