ಮೈಸೂರು: ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಿಟಿ ರವಿ, ಕಾಂಗ್ರೆಸ್ ಈ ಚುನಾವಣೆಯಲ್ಲಿ ಡಬಲ್ ಡಿಜಿಟ್ ಕೂಡ ದಾಟಲ್ಲ. ಹೀಗಾಗಿ ಇವರ ವಿಭಜನೆಯ ಯೋಚನೆ ಪ್ರಣಾಳಿಕೆಯಲ್ಲಿಯೇ ಸತ್ತು ಹೋಗುತ್ತದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ನಡೆದ ಹಗರಣಗಳಿಗೆ ಕಾರಣರು ಯಾರು? ಮೋದಿ ರಾಜ್ಯಕ್ಕೆ ಕೊಟ್ಟ ತೆರಿಗೆ ಹಣ, ಅನುದಾನ ಎಷ್ಟು? ಮನಮೋಹನ್ ಸಿಂಗ್ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು ಎಷ್ಟು ಚರ್ಚೆಗೆ ಬನ್ನಿ. ನಾವು ಸಿದ್ಧ ಎಂದು ಕಾಂಗ್ರೆಸ್ಗೆ ಸಿಟಿ ರವಿ ಸವಾಲೆಸೆದರು.