ಪ್ರತಿನಿಧಿ ವರದಿ ಚಾಮರಾಜನಗರ
ತಾಲೂಕಿನ ಹರವೆ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮದ ಹೊರ ವಲಯದಲ್ಲಿ ಬಂಡಿ ಓಡಿಸುವ ಆಕರ್ಷಕ ಉತ್ಸವ ನಡೆಯಿತು.
ಗ್ರಾಮದಲ್ಲಿ 2 ಬಂಡಿಗಳನ್ನು ಕಟ್ಟಿ, ಬಣ್ಣ ಬಣ್ಣದ ದಾಳಗಳನ್ನು ಅಲಂಕರಿಸಿ, ಸಂಜೆ 4ರವೇಳೆಗೆ ಎರಡು ಬಂಡಿಗಳನ್ನು ಗ್ರಾಮದ ಉಪ್ಪರಿಕೆ ಬಸವೇಶ್ವರ ದೇವಾಲಯದ ಬಳಿ ನಿಲ್ಲಿಸಿ ತೀರ್ಥ ಸಂಪ್ರೋಕ್ಷಣೆ ಮಾಡಲಾಯಿತು.
ಬಳಿಕ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಬಂಡಿಮಾಳಕ್ಕೆ ಬಂಡಿಗಳು ಆಗಮಿಸಿದವು. ಒಂದೊಂದು ಬಂಡಿಗೂ ಒಂದು ಜತೆ ಎತ್ತುಗಳನ್ನು ಕಟ್ಟಿ, ಉದ್ಘೋಷಗಳ ನಡುವೆ ಬಂಡಿಉತ್ಸವ ನಡೆಸಲಾಯಿತು.
ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂಡಿಮಾಳಕ್ಕೆ ಆಗಮಿಸಿ, ಬಂಡಿ ಓಡಾಟದ ಉತ್ಸವವನ್ನು ಕಣ್ತುಂಬಿಕೊಂಡರು.
10ಸಿಎಚ್ಎನ್.5:
ಚಿತ್ರವಿದೆ