ಬೆಂಗಳೂರು: ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ಮೇಲೂ ನೀರಿನ ಕೊರತೆ ಪರಿಣಾಮ ಬೀರಿದೆ. ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ದರ ಹೆಚ್ಚಳ ಮಾಡಲಾಗಿದ್ದು, ಇದೀಗ ದುಪ್ಪಟ್ಟಾಗಿದೆ. ಈವರೆಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ವಹಿಸುವ ಸಾರ್ವಜನಿಕ ಶೌಚಾಲಯಗಳು ಜನರಿಂದ ಮೂತ್ರ ವಿಸರ್ಜನೆಗೆ 2 ರೂ. ಮತ್ತು ಮಲವಿಸರ್ಜನೆಗೆ 5 ರೂ. ವಿಧಿಸುತ್ತಿದ್ದವು. ಆದರೆ ನಗರದಲ್ಲಿ ನೀರಿನ ಕೊರತೆ ಕಾಣಿಸಿಕೊಂಡ ಕಾರಣ ಕಳೆದ ಕೆಲವು ದಿನಗಳಿಂದ ದರವನ್ನು ಕ್ರಮವಾಗಿ 5 ಮತ್ತು 10 ರೂ.ಗೆ ಹೆಚ್ಚಿಸಲಾಗಿದೆ.
ಸಾರ್ವಜನಿಕ ಶೌಚಾಲಯಗಳಲ್ಲಿ ಇದೀಗ ಸಣ್ಣ ಬಕೆಟ್ಗಳಲ್ಲಿ ನೀರು ಇಡಲಾಗುತ್ತಿದೆ. ಹೆಚ್ಚುವರಿ ನೀರು ಬಳಸಿದರೆ ಹೆಚ್ಚುವರಿ ಹಣವನ್ನೂ ನೀಡಬೇಕಾಗುತ್ತದೆ.
ಹೆಚ್ಚುವರಿ ಶುಲ್ಕ ವಿಧಿಸಲು ಬೋರ್ವೆಲ್ಗಳಲ್ಲಿ ನೀರಿಲ್ಲದಿರುವುದು ಮತ್ತು ನೀರಿನ ಕೊರತೆ ಕಾರಣ ಎಂದು ಶೌಚಾಲಯ ನಿರ್ವಾಹಕರು ಹೇಳಿದ್ದಾರೆ. ನೀರಿನ ಟ್ಯಾಂಕರ್ಗಳು ಬೆಲೆ ಹೆಚ್ಚಿಸಿವೆ. ಹೀಗಾಗಿ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ವೆಚ್ಚ ಹೆಚ್ಚಿಸಲಾಗಿದೆ ಎಂದು ಅವರು ಹೇಳುದ್ದಾರೆ.